ಬಾಪೂಜಿ ಆಸ್ಪತ್ರೆಯಿಂದ ಉಚಿತ ಲಸಿಕೆ

ಬಾಪೂಜಿ ಆಸ್ಪತ್ರೆಯಿಂದ ಉಚಿತ ಲಸಿಕೆ - Janathavaniದಾವಣಗೆರೆ, ಮೇ 28- ತಮ್ಮ ಸ್ವಂತ ಖರ್ಚಿನಲ್ಲಿ ಜನರಿಗೆ ಲಸಿಕೆ ನೀಡಲು 40 ಸಾವಿರ ಡೋಸ್ ತರಿಸಲು ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಮುಂದಾಗಿದ್ದಾರೆ.

ಇನ್ನೆರಡು ಮೂರು ದಿನಗಳಲ್ಲಿ 10 ಸಾವಿರ ಡೋಸ್ ವುಳ್ಳ 1 ಸಾವಿರ ಬಾಟಲ್ ಗಳು ನಗರಕ್ಕೆ ಬರಲಿವೆ. ಮುಂದಿನ ದಿನಗ ಳಲ್ಲಿ ಸಾರ್ವಜನಿಕರಿಗೆ ಹಂತ – ಹಂತವಾಗಿ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ಎಸ್ಸೆಸ್ ಅವರು ತಿಳಿಸಿದ್ದಾರೆ.

ನಗರದ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪಕ್ಕೆ ಕಾರ್ಯ ನಿಮಿತ್ತ್ಯ ಇಂದು ಭೇಟಿ ನೀಡಿದ್ದ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

 ಕೋವಿಡ್ ಲಸಿಕೆಯನ್ನು ನಾಗರಿಕರಿಗೆ ಉಚಿತವಾಗಿ ನೀಡುವ ಸದುದ್ದೇಶದಿಂದ ಬಾಪೂಜಿ ಆಸ್ಪತ್ರೆ ಮತ್ತು ಎಸ್.ಎಸ್. ಹೈಟೆಕ್ ಆಸ್ಪತ್ರೆಗಳಿಂದ ಲಸಿಕೆ ಖರೀದಿಸಲು ಕಂಪನಿಗಳೊಂದಿಗೆ ನಡೆಸಿದ ಸತತ ಚರ್ಚೆಯಿಂದಾಗಿ  ಲಸಿಕೆ ಕಂಪನಿಗಳು ಒಪ್ಪಿಕೊಂಡಿದ್ದು, ಇದೀಗ ನಗರಕ್ಕೆ ಬರಲಿವೆ ಎಂದು ಅವರು ಹೇಳಿದರು. 

ಲಸಿಕೆ ಹಾಕಿಸುವಲ್ಲಿ ರಾಜಕಾರಣ ಮಾಡುವುದು ಸಲ್ಲದು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಂಬ ತಾರತಮ್ಯ ಮಾಡದೇ ಎಲ್ಲರೂ ಒಗ್ಗೂಡಿ ಮಹಾಮಾರಿ ಕೊರೊನಾ ತೊಲಗಿಸಲು ಮುಂದಾಗಬೇಕು. ಜನ ಸಾಮಾನ್ಯರಿಗೆ ಸುಲಭವಾಗಿ ಲಸಿಕೆ ಹಾಕಿಸುವಲ್ಲಿ ಸರ್ವ ಪಕ್ಷಗಳ ಮುಖಂಡರು, ಕಾರ್ಯಕರ್ತರು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಎಸ್ಸೆಸ್ ಹಿತನುಡಿದರು.

error: Content is protected !!