ದಾವಣಗೆರೆ, ಮಾ.16- ಇಂದಿನ ಯುವಜನತೆ ಮೊಬೈಲ್ ಸಂಸ್ಕೃತಿಗೆ ಮಾರುಹೋಗಿ ತನ್ನ ಜವಾಬ್ದಾರಿ ಮತ್ತು ಸಮಯ ಪ್ರಜ್ಞೆಯಿಂದ ದೂರ ಉಳಿಯುತ್ತಿದ್ದಾರೆ ಎಂದು ಮಹಾಪೌರ ಎಸ್.ಟಿ. ವೀರೇಶ್ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ ಹಾಗೂ ದಾವಣಗೆರೆ ವಿವಿ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಅಂತರ ಕಾಲೇಜು ದಾವಣಗೆರೆ ವಲಯ ಮತ್ತು ಅಂತರ ವಲಯದ ಬಾಲ್ ಬ್ಯಾಡ್ಮಿಂಟನ್ ಪುರುಷರ ಹಾಗೂ ಮಹಿಳೆಯರ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿಗಳು ಒಂದಿಲ್ಲೊಂದು ಕ್ರೀಡೆಯಲ್ಲಿ ತೊಡಗಿಸಿಕೊಂಡಾಗ ಮಾನಸಿಕ ಮತ್ತು ದೈಹಿಕ ಆರೋಗ್ಯ ಸುಧಾರಣೆ ಯಾಗುತ್ತದೆ ಎಂದರು.
ಮಾನಸಿಕ ನೆಮ್ಮದಿಗೆ ಕ್ರೀಡೆ ಅತ್ಯಂತ ಸಹಕಾರಿಯಾ ಗಿದ್ದು, ನಮಗೆ ನೀಡಿರುವ ಜವಾಬ್ದಾರಿಯನ್ನು ಸಮ ರ್ಥವಾಗಿ ನಿಭಾಯಿಸಬೇಕು. ಗುರಿ ಸಾಧನೆಗೆ ದೃಢ ಸಂಕಲ್ಪ ಮಾಡಬೇಕೆಂದರು.
ಪ್ರಾಂಶುಪಾಲ ಟಿ. ವೀರೇಶ್ ವಹಿಸಿದ್ದರು. ಉಪನ್ಯಾಸಕರಾದ ಭೀಮಣ್ಣ ಸುಣಗಾರ್, ವೀರೇಂದ್ರ, ಮಹೇಶ್ ಪಾಟೀಲ್, ಸದಾಶಿವ, ಡಾ. ವೆಂಕಟೇಶ್, ತಿಪ್ಪೇಸ್ವಾಮಿ, ಬಸವರಾಜ್ ದಮ್ಮಳ್ಳಿ, ರಂಗಸ್ವಾಮಿ ಉಪಸ್ಥಿತರಿದ್ದರು.
ಶಾಂತಮ್ಮ ಪ್ರಾರ್ಥಿಸಿದರು. ಭೀಮಣ್ಣ ಸುಣಗಾರ್ ನಿರೂಪಿಸಿದರು. ವೀರೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗಸ್ವಾಮಿ ಸ್ವಾಗತಿಸಿದರು. ಮಹೇಶ್ ಪಾಟೀಲ್ ವಂದಿಸಿದರು.