ಮೈ ಮರೆತು ಖರೀದಿಗೆ ಮುಗಿ ಬೀಳುವ ಜನರು ಪುನಃ ಹಳೇ ಚಾಳಿ : ಮುಂಜಾಗ್ರತೆಯಿಂದ ದೂರ

ದಾವಣಗೆರೆ, ಮೇ 24- ಜಿಲ್ಲೆಯಲ್ಲಿ ಒಂದು ವಾರಗಳ ಕಾಲ ಸಂಪೂರ್ಣ ಲಾಕ್ ಡೌನ್ ಆದೇಶವಿದ್ದು, ಬೆಳಗ್ಗೆ 10 ಗಂಟೆಯವರೆಗಿನ ಅಗತ್ಯ ವಸ್ತುಗಳ ಖರೀದಿಯ ಅವಕಾಶದ ವೇಳೆ ಜನಜಂಗುಳಿ, ಕೊರೊನಾ ಮುಂಜಾಗ್ರತೆ ಮಾಯವಾಗುತ್ತಿದೆ.

ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಜನರು ಮಾತ್ರ ಮೈ ಮರೆತಿದ್ದಾರೆ. ಅವಕಾಶದ ಸಮಯದಲ್ಲಿ ಸಾಮಾಜಿಕ ಅಂತರ, ಕೊರೊನಾ ಮುಂಜಾಗ್ರತಾ ಕ್ರಮಗಳ ಪಾಲನೆಯಿಂದ ದೂರ ಸರಿದು, ಕೇವಲ ಖರೀದಿಗೆ ಮುಗಿ ಬೀಳುತ್ತಿರುವುದು ಭಯ ಹುಟ್ಟಿಸುವಂತೆ ಮಾಡಿದೆ.

ಅಗತ್ಯ ವಸ್ತುಗಳ ಪ್ರತಿ ಅಂಗಡಿ ಮುಂಗ ಟ್ಟುಗಳ ಮುಂದೆ ಜನಜಂಗುಳಿ ಇರುತ್ತದೆ. ತರ ಕಾರಿ, ಹಣ್ಣು ಖರೀದಿಗೆ ಜನಜಾತ್ರೆ ಕಂಡು ಬರು ತ್ತಿದೆ. ಅಲ್ಲದೇ, ಅವಕಾಶದ ಸಮಯ ಮೀರಿಯೂ ಜನ ಕುಂಟು ನೆಪ ಹೇಳಿ ರಸ್ತೆಗಿಳಿಯುತ್ತಿರುವುದು ಪೊಲೀಸ್ ಇಲಾಖೆ, ಜಿಲ್ಲಾಡಳಿತ, ತಾಲ್ಲೂಕು ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

ಬೆಳಗ್ಗೆ ಯಾವುದೇ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡದೇ ಸಂಪೂರ್ಣ ಲಾಕ್ ಡೌನ್ ವಿಧಿಸಿದ ಮೊದಲ ದಿನವೂ ಕೆಲವರು ಅದನ್ನು ಮೀರಿ ರಸ್ತೆಗಿಳಿದಿದ್ದರು. 2ನೇ ದಿನವಾದ ಭಾನುವಾರ ನಗರವೆಲ್ಲಾ ಸಂಪೂರ್ಣ ಸ್ತಬ್ದವಾಗಿತ್ತು. ಜನ ಓಡಾಟವು ವಿರಳವಾಗಿತ್ತು. ಇಂದು ಪುನಃ ಬೆಳಗ್ಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡುತ್ತಿದ್ದಂತೆ ಜನರು ಹಳೇ ಚಾಳಿಯನ್ನೇ ಮುಂದುವರೆಸಿದರು. 

ರಸ್ತೆಗೆ ಇಳಿದ ತಹಶೀಲ್ದಾರ್ ಗಿರೀಶ್: ನಗರದ ಕೆಆರ್ ಮಾರುಕಟ್ಟೆಯಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ತಹಶೀಲ್ದಾರ್ ಗಿರೀಶ್ ಇಂದು ಕ್ಲಾಸ್ ತೆಗೆದುಕೊಂಡರು. ಸರ್ಕಾರದ ಆದೇಶವನ್ನು ಪಾಲನೆ ಮಾಡುವಂತೆ ಮನವಿ ಸಹ ಮಾಡಿದರು. ಪೆೊಲೀಸರ ಜೊತೆಗೂಡಿ ದಂಡ ವಿಧಿಸಿದರು. ಪ್ರತಿಯೊಂದು ಏರಿಯಾಗಳಲ್ಲಿ ಸಂಚರಿಸಿ ಮನೆಯಿಂದ ಹೊರ ಬಾರದಂತೆ ತಹಶೀಲ್ದಾರ್ ಸೂಚನೆ ನೀಡಿದರು.

ಕೊತ್ತಂಬರಿ ಸೊಪ್ಪು ತರಲು ಬಂದ ವ್ಯಕ್ತಿಗೆ ಪೊಲೀಸರು ಕ್ಲಾಸ್ ತೆಗೆದುಕೊಂಡ ಘಟನೆ ನಗರದ ಎಂಜಿ ರಸ್ತೆಯಲ್ಲಿ ನಡೆಯಿತು. ಅವಧಿ ಮುಗಿದರೂ ಸಂಚಾರ ನಡೆಸುವ ವಾಹನಗಳ ತಪಾಸಣೆ ನಡೆಸುತ್ತಿದ್ದಾಗ ಬಂದ ಬೈಕ್ ಸವಾರನನ್ನು ನಿಲ್ಲಿಸಿ ಪೆೊಲೀಸರು ಪರಿಶೀಲನೆ ನಡೆಸಿದರು. 

ಕೊತ್ತಂಬರಿ, ತರಕಾರಿ ತರೋಕೆ ಹೋಗಿದ್ದೆ ಎಂದು ಬೈಕ್ ಸವಾರ ಸಬೂಬು ಹೇಳಿದ. ಹತ್ತು ಗಂಟೆಯವರೆಗೂ ಮಾತ್ರ ಅವಕಾಶವಿದ್ದರೂ ತೆಗೆದುಕೊಳ್ಳುವುದನ್ನು ಬಿಟ್ಟು ಈಗ ಬಂದಿದ್ದೀರಾ ಎಂದು ಕ್ಲಾಸ್ ತೆಗೆದುಕೊಂಡರು. ಒಂದು ವಾರಗಳ ಕಾಲ ಕಂಪ್ಲೀಟ್ ಲಾಕ್ ಡೌನ್ ಇದ್ದರೂ ಸಬೂಬು ಹೇಳಿಕೊಂಡು ಜನರು ಹೊರ ಬರುತ್ತಿದ್ದಾರೆ.

error: Content is protected !!