ಬಿ.ಇಡಿ. ಕಾಲೇಜುಗಳ ವಿರುದ್ಧ ತನಿಖೆಗೆ ಆಗ್ರಹ

ದಾವಣಗೆರೆ, ಮಾ.15- ಬಿ.ಇಡಿ ಸೀಟುಗಳನ್ನು ಮಾರಾಟ ಮಾಡುತ್ತಿರುವ ಕಾಲೇಜುಗಳ ವಿರುದ್ಧ ತನಿಖೆ ಕೈಗೊಳ್ಳುವಂತೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ದಾವಣಗೆರೆ ವಿಭಾಗದ ಕಾರ್ಯಕರ್ತರು ನಗರದಲ್ಲಿಂದು ಉಪವಿಭಾಗಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಯಾವ ರಾಜ್ಯ ದೇಶಕ್ಕೆ ಮಾದರಿ ಆಗಿತ್ತೋ ಆ ರಾಜ್ಯ ದಲ್ಲಿಂದು ಬಿ.ಇಡಿ ಸೀಟುಗಳನ್ನು ಅಕ್ರಮ ವಾಗಿ ಮಾರಾಟ ಮಾಡುತ್ತಿರುವ ದಂಧೆ ನಡೆದಿರುವುದು ಬೇಸರದ ಸಂಗತಿ. ಬಿ.ಇಡಿ ಕೋರ್ಸ್‌ಗೆ ಡಿಮ್ಯಾಂಡ್ ಇರುವುದನ್ನು ಅರಿತ ಕೆಲವು ಬಿ.ಇಡಿ ಶಿಕ್ಷಣ ಸಂಸ್ಥೆಗಳು ಒಂದು ರೀತಿಯಲ್ಲಿ ಬಿ.ಇಡಿ ಪ್ರಮಾಣ ಪತ್ರವನ್ನು ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿವೆ ಎಂದು ಸಂಘಟ ನೆಯ ಕಾರ್ಯಕರ್ತರು ಆರೋಪಿಸಿದರು.

ಬಿ.ಇಡಿ ಕೋರ್ಸ್ ಮಾಡಲು ಬಯ ಸುವ, ಆದರೆ ತರಗತಿಗಳಿಗೆ ಹಾಜರಾಗಲು ಇಷ್ಟವಿಲ್ಲದವರನ್ನು ಆಯ್ಕೆ ಮಾಡಿಕೊಂಡು, ಅಕ್ರಮವಾಗಿ ಪ್ರಮಾಣ ಪತ್ರ ನೀಡಲಾಗು ತ್ತಿದೆ. ಈ ಅಕ್ರಮಕ್ಕಾಗಿ ಇಂತಹ ವಿದ್ಯಾರ್ಥಿ ಗಳಿಂದ ಶುಲ್ಕ ಮಾತ್ರವಲ್ಲದೆ, ಹೆಚ್ಚುವರಿ ಹಣ ಪಡೆದುಕೊಳ್ಳಲಾಗುತ್ತದೆ. ಇದಲ್ಲದೆ ಸರ್ಕಾರಿ ಕೋಟಾದಡಿಯಲ್ಲಿ ಸೀಟು ಪಡೆದು ಬಂದ ವಿದ್ಯಾರ್ಥಿಗಳಿಂದ ಖಾಸಗಿ ಬಿ.ಇಡಿ ಕಾಲೇಜುಗಳು ಬೇಕಾಬಿಟ್ಟಿ ದುಡ್ಡು ವಸೂಲಿ ಮಾಡುತ್ತಿರುವುದು ಖಂಡನಾರ್ಹ ಎಂದು ಆಕ್ಷೇಪಿಸಿದರು.

ಬಿ.ಇಡಿ ಪದವಿ ಪಡೆದುಕೊಳ್ಳಲು ಅಕ್ರಮ ಮಾರ್ಗ ಕಂಡುಕೊಂಡವರು ಕಾಲ ಕಾಲಕ್ಕೆ ಸಲ್ಲಿಸಬೇಕಾದ ಅಸೈನ್‌ಮೆಂಟ್‌ ಗಳನ್ನು ಕೂಡ ಕಾಲೇಜಿನವರೇ ಒದಗಿಸುತ್ತಾರೆ. ಅದನ್ನೇ ನೋಡಿಕೊಂಡು ವಿದ್ಯಾರ್ಥಿಗಳು ಅಸೈನ್‌ಮೆಂಟ್ ಬರೆದುಕೊಡಬಹುದು. ಸರ್ಕಾರ ತಕ್ಷಣವೇ ಬಿ.ಇಡಿ ಕಾಲೇಜುಗಳಲ್ಲಿ ಅಕ್ರಮ ದಂಧೆಯಲ್ಲಿ ತೊಡಗಿಸಿಕೊಂಡವರ ವಿರುದ್ಧ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ನಗರ ಹೋರಾಟ ಪ್ರಮುಖ್ ಶಶಾಂಕ್ ಚವ್ಹಾಣ್, ನಗರ ಸಂಪರ್ಕ ಪ್ರಮುಖ್ ದೊಡ್ಡೇಶ್, ಎ.ಎಂ. ಕೊಟ್ರೇಶ್, ನರೇಂದ್ರ ಪವಾರ್, ಸುರೇಶ್ ಗೌಡ, ಸುಮನ್ ಗೌಡ, ಅನಂತ್ ಪಾಟೀಲ್, ಜೆ.ಹೆಚ್. ಸಿದ್ದೇಶ್ ಹಾಗೂ ಮತ್ತಿತರರಿದ್ದರು.

error: Content is protected !!