ರಾಣೇಬೆನ್ನೂರು, ಮೇ 23- ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಿಂದ ಸಾರಿಗೆ ವಿಭಾಗದ ಪ್ರತಿ ತಾಲ್ಲೂಕಿ ಗೊಂದರಂತೆ ಆಕ್ಸಿಜನ್ ಬಸ್ ಕೊಡಲು ತೀರ್ಮಾನಿಸಿದಂತೆ ನಿಗಮದ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ ಅವರು ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪರಮೇಶ್ವರ ಅವರ ಸುಪರ್ದಿಗೆ ಕೊಟ್ಟರು.
ಸಂಸ್ಥೆಯ ನಿರ್ದೇಶಕ ಸಂತೋಷ್ ಪಾಟೀಲ್, ಸಚಿವ ಶಂಕರ್, ಅರಣ್ಯ ಇಲಾಖೆ ನಿರ್ದೇಶಕಿ ಭಾರತಿ ಜಂಬಗಿ, ಬಿಜೆಪಿ ಮುಖಂಡರಾದ ಬಸವರಾಜ್ ಲಕ್ಷ್ಮೇಶ್ವರ್, ಎ.ಬಿ. ಪಾಟೀಲ್, ಜಿ.ಜಿ.ಹೊಟ್ಟಿಗೌಡ್ರ, ಉಮೇಶ್ ಹೊನ್ನಾಳಿ, ನಗರಸಭೆ ಸದಸ್ಯರು, ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತಿತರರಿದ್ದರು.