ಜಗಳೂರು, ಮೇ 23- ಜಗಳೂರು ಪಟ್ಟಣದ ಪೊಲೀಸ್ ಸಿಬ್ಬಂದಿಗೆ ಹಾಗೂ ಪತ್ರಿಕಾ ಮಾಧ್ಯಮದ ಮಿತ್ರರಿಗೆ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಡಿವೈಎಸ್ಪಿ ನರಸಿಂಹ ವಿ. ತಾಮ್ರಧ್ವಜ್ ಅವರು ಸೋಮವಾರ ಎಲೆಕ್ಟ್ರಾನಿಕ್ ಸ್ಟೀಮ್ ಮಿಷನ್ ವಿತರಣೆ ಮಾಡಿದರು.
ನಂತರ ಮಾತನಾಡಿದ ಅವರು, ಕೋವಿಡ್ ಅತಿ ವೇಗವಾಗಿ ಹರಡುತ್ತಿರುವುದರಿಂದ ಹಗಲಿರುಳು ಶ್ರಮಿಸುತ್ತಿರುವ ಪೊಲೀಸ್ ಸಿಬ್ಬಂದಿಗಳು ಹಾಗೂ ಮಾಧ್ಯಮ ಮಿತ್ರರು ಸುರಕ್ಷಿತವಾಗಿರಲು ಎಲೆಕ್ಟ್ರಾನಿಕ್ ಸ್ಟೀಮ್ ಮಿಷನ್ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿಪಿಐ ಮಂಜುನಾಥ್ ಪಂಡಿತ್, ಪಿಎಸ್ಐ ಸಂತೋಷ್ ಬಾಗೋಜಿ, ಬಿಳಿಚೋಡು ಪಿಎಸ್ಐ ಶೈಲಶ್ರೀ, ಪತ್ರಕರ್ತರಾದ ಲೋಕೇಶ್, ಬಸವರಾಜ್, ಮಂಜಯ್ಯ, ರಾಜಪ್ಪ, ಮಾರುತಿ, ಬಾಬು, ವಾಸೀಮ್, ರಕೀಬ್ ಮತ್ತಿತರರು ಉಪಸ್ಥಿತರಿದ್ದರು.