ಅವಳಿ ತಾಲ್ಲೂಕಿನ ಅತಿವೃಷ್ಟಿ ಪೀಡಿತ ಪ್ರದೇಶಗಳನ್ನು ಪರಿಶೀಲಿಸಿದ ಎಂಪಿಆರ್‌

ಹೊನ್ನಾಳಿ – ನ್ಯಾಮತಿ, ಆ.1- ಅವಳಿ ತಾಲ್ಲೂಕಿನ ಅತಿವೃಷ್ಟಿ ಪೀಡಿತ ಪ್ರದೇಶಗಳಿಗೆ ಇಂದು ಭೇಟಿ ನೀಡಿದ್ದ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ರೈತರೊಂದಿಗೆ ಪರಿಶೀಲಿಸಿದರು.

ಮಾರಿಕೊಪ್ಪ, ಹತ್ತೂರು, ಚಿಕ್ಕೇರಹಳ್ಳಿ, ದೊಡ್ಡೇರಹಳ್ಳಿ, ಮಾದೇನಹಳ್ಳಿ, ಕತ್ತಿಗಿ, ಜೀನಹಳ್ಳಿ, ಗುಡ್ಡೇಹಳ್ಳಿ ಗ್ರಾಮಗಳಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಶಾಸಕರು, ಪರಿಶೀಲನೆ ನಡೆಸಿದರು.

ಅವಳಿ ತಾಲ್ಲೂಕಿನಲ್ಲಿ ವಾಡಿಕೆಗಿಂತ ಶೇ. 60 ರಷ್ಟು ಮಳೆಯ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ 2,400 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾದ ಮೆಕ್ಕೆಜೋಳದಲ್ಲಿ 583 ಹೆಕ್ಟೇರ್ ಮೆಕ್ಕೆಜೋಳದ ಬೆಳೆ ಹಾಳಾಗಿದೆ. 107 ಮನೆಗಳಿಗೆ ಹಾನಿ ಸಂಭವಿಸಿದ್ದು, ನ್ಯಾಮತಿ ತಾಲ್ಲೂಕಿನಲ್ಲಿ 150 ಎಕರೆ ಈರುಳ್ಳಿ ಬೆಳೆ ಹಾಳಾಗಿದೆ ಎಂದರು.

ಈ ಸಂದರ್ಭ ಕೃಷಿ ಅಧಿಕಾರಿ ಸುರೇಶ್ ಸೇರಿದಂತೆ ಕಂದಾಯ ಇಲಾಖೆ ಇಲಾಖೆ ಅಧಿಕಾರಿಗಳು, ಬಗರ್‌ಹುಕ್ಕುಂ ಕಮಿಟಿ ಅಧ್ಯಕ್ಷ ನಾಗರಾಜ್ ಸೇರಿದಂತೆ ವಿವಿಧ ಇಲಾಖೆ ಮುಖಂಡರಿದ್ದರು.

error: Content is protected !!