ಕೂಡ್ಲಿಗಿ, ಆ.1- ಹೊಸಪೇಟೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಅವರನ್ನು ಕೂಡ್ಲಿಗಿ ತಾಲ್ಲೂಕಿನ ಕಾನಾಹೊಸಹಳ್ಳಿ ಬಳಿ ಕಾಂಗ್ರೆಸ್ ಮುಖಂಡರು ನಿನ್ನೆ ಸಂಜೆ ಸ್ವಾಗತಿಸಿದರು. ಕಾನಾಹೊಸಹಳ್ಳಿ ಭಾಗದ ಕಾಂಗ್ರೆಸ್ ಮುಖಂಡರು, ಮಧು ಬಂಗಾರಪ್ಪ ಅವರನ್ನು ಸ್ವಾಗತಿಸಿ ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಚಿಕ್ಕಜೋಗಿಹಳ್ಳಿಯ ಕೆ.ವಿ.ಆರ್.ಸತ್ಯಬಾಬು, ಮಧು, ಲೋಕಿಕೆರೆ ಲಕ್ಕಜ್ಜಿ ಮಲ್ಲಿಕಾರ್ಜುನ್, ಕಾಂಗ್ರೆಸ್ ಮುಖಂಡರಾದ ಜಮ್ಮೋಬನಹಳ್ಳಿ ಜಿ. ಓಬಣ್ಣ, ಹಿಮಂತರಾಜ್, ಶರಣೇಶ್, ದಾಸಪ್ಪ, ಸೂರಯ್ಯ, ಬೂದೇರ ಬಸಪ್ಪ, ರಾಜಣ್ಣ, ರಾಮಣ್ಣ, ಗೋಪಾಲ್, ಟಿ.ಕಲ್ಲಹಳ್ಳಿ ಉಪ್ಪಾರ ವೆಂಕಟೇಶ್, ದಾಸಪ್ಪ ಸೇರಿದಂತೆ ಇತರರಿದ್ದರು.