ಸಬ್‌ಇನ್ಸ್‌ಪೆಕ್ಟರ್ ಹುಟ್ಟು ಹಬ್ಬ ಆಮ್ಲಜನಕ ಸಿಲಿಂಡರ್ ವಿತರಣೆ

ಹರಿಹರ, ಮೇ 20- ತಾಲ್ಲೂಕಿನ ಪೊಲೀಸ್ ವೃತ್ತ ನಿರೀಕ್ಷಕ ಯು. ಸತೀಶ್ ಕುಮಾರ್ ಅವರ ಹುಟ್ಟು ಹಬ್ಬದ ನಿಮಿತ್ತ ಆಮ್ಲಜನಕದ ಸಿಲಿಂಡರ್‌ಗಳನ್ನು ಆಸ್ಪತ್ರೆಗಳಿಗೆ ಉಚಿತವಾಗಿ ನೀಡಲಾಯಿತು. 

ಈ ಸಂದರ್ಭದಲ್ಲಿ ದಾವಣಗೆರೆ ಉಪವಿಭಾಗದ ಅಧೀಕ್ಷಕ ನರಸಿಂಹ ವಿ. ತಾಮ್ರಧ್ವಜ ಮಾತನಾಡಿ, ದಿನದಿನಕ್ಕೆ ಜನರ ಜೀವವನ್ನು ಬಲಿ ತೆಗೆದುಕೊಳ್ಳುತ್ತಿರುವ   ಕೊರೊನಾ ವೈರಸ್ ನಿಂದ ಸಾಕಷ್ಟು ಸಾವು-ನೋವುಗಳನ್ನು ನೋಡುತ್ತಿದ್ದೇವೆ.  ಇದನ್ನು ಮನಗಂಡ ನಮ್ಮ ಪೊಲೀಸ್ ಠಾಣೆಯ ಅಧಿಕಾರಿ, ಸಿಬ್ಬಂದಿ ವರ್ಗದವರು ವೃತ್ತ ನಿರೀಕ್ಷಕರ ಹುಟ್ಟುಹಬ್ಬದ ದಿನದಂದು ಜನರ ಜೀವ ಉಳಿಸುವ ಆಮ್ಲಜನಕದ ಸಿಲಿಂಡರ್‌ಗಳನ್ನು ಚಿಕಿತ್ಸೆ ಪಡೆಯುತ್ತಿರುವ ವರಿಗೆ ನೀಡಿರುವುದು ಶ್ಲ್ಯಾಘನೀಯ ಎಂದು ಹೇಳಿದರು.  

ವೃತ್ತ ನಿರೀಕ್ಷಕ ಸತೀಶ್ ಕುಮಾರ್ ಮಾತನಾಡಿ,   ಮಲೇಬೆನ್ನೂರು ಮತ್ತು ಹರಿಹರ ಗ್ರಾಮಾಂತರ ಠಾಣೆಯ ಪಿಎಸ್‌ಐಗಳು, ಸಿಬ್ಬಂದಿ ವರ್ಗದವರು ಸೇರಿ ಅತಿ  ಅವಶ್ಯಕತೆ ಇರುವ ಆಮ್ಲಜನಕ ಸಿಲಿಂಡರ್‌ಗಳನ್ನು ಮಲೇಬೆನ್ನೂರು ಸುತ್ತಮುತ್ತಲಿನ   ಪ್ರದೇಶದಲ್ಲಿ 32 ಸಿಲಿಂಡರುಗಳನ್ನು ಸಂಗ್ರಹಿಸಿ, ಹರಿಹರ  ತಾಲ್ಲೂಕಿನ ತುರ್ತು ಅಗತ್ಯವಿರುವವರಿಗೆ ಒದಗಿಸುವ ಮೂಲಕ  ಜೀವ ಉಳಿಸುವುದಕ್ಕೆ  ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮುಂದಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಮಲೇಬೆನ್ನೂರು ಪಿಎಸ್‌ಐ ವೀರಬಸಪ್ಪ ಕುಸಲಾಪುರ, ಹರಿಹರ ನಗರ ಠಾಣೆಯ ಪಿಎಸ್‌ಐ ಸುನೀಲ್ ಬಸವರಾಜ್ ತೇಲಿ, ಗ್ರಾಮಾಂತರ ಠಾಣೆಯ ಪಿಎಸ್ಐ ಡಿ. ರವಿಕುಮಾರ್ ಎಎಸ್‌ಐ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!