ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎ. ಗೋವಿಂದ ರೆಡ್ಡಿ ಒತ್ತಾಯ
ದಾವಣಗೆರೆ, ಮೇ 19- ಕೊರೊನಾ ವೈರಸ್ ಗ್ರಾಮೀಣ ಜನರನ್ನು ಕಾಡುತ್ತಿರುವುದು ಶೊಚನೀಯವಾಗಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎ. ಗೋವಿಂದ ರೆಡ್ಡಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಕೊರೊನಾ ವೈರಸ್ ಎಂಬ ಒಂದು ದೈತ್ಯ ಮಾರಣಾಂತಿಕ ರೋಗದಿಂ ದಾಗಿ ಹಳ್ಳಿ ಜನರ ಬದುಕು ಛಿದ್ರವಾಗು ತ್ತಿದೆ. ಈ ಬಗ್ಗೆ ಸರ್ಕಾರ ಗ್ರಾಮೀಣ ಜನರ ಸಂಕಷ್ಟ ಗಳನ್ನು ಪರಿಹರಿಸಲು ಸಮರೋ ಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕಿದೆ. ಆ ದಿನವೇ ದುಡಿದು ಅದರಿಂದ ಬಂದ ಕೂಲಿ ಯಿಂದ ತುತ್ತಿನ ಚೀಲ ತುಂಬಿಸಿಕೊ ಳ್ಳುತ್ತಿದ್ದ ಬಡ ಕೂಲಿಕಾರ್ಮಿಕರ ಕುಟುಂಬಗಳು ಅನ್ನವಿಲ್ಲದೆ ಹಸಿವಿನಿಂದ ನರಳುತ್ತಿವೆ. ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಹಾಗೂ ಜನ ಪ್ರತಿನಿಧಿಗಳ ಬೇಜವಾಬ್ದಾರಿತನದಿಂದಾಗಿ ಸೋಂಕಿತರು ಸಾಲುಸಾಲು ಮರಣ ಹೊಂದುತ್ತಿದ್ದಾರೆ ಎಂದು ಹೇಳಿದ್ದಾರೆ.
ಗ್ರಾಮೀಣ ಮಟ್ಟದಲ್ಲಿ ವೈರಸ್ಸನ್ನು ತಡೆಗಟ್ಟಲು ಗ್ರಾಮ ಪಂಚಾಯತ್ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಕು ತ್ತಿರುವ ಶ್ರಮ ಮತ್ತು ಸೇವೆ ಶ್ಲಾಘನೀಯ ವಾಗಿದೆ. ಅವರ ಕಾರ್ಯಕ್ಕೆ ಸರಿಸಾಟಿ ಇಲ್ಲ ಎಂದು ಅವರು ಪ್ರಸಂಶಿಸಿದರು.
ಜಿಲ್ಲಾ ಮತ್ತು ತಾಲೂಕಿನಾದ್ಯಂತ ಕೊರೊನಾ ಸೆಂಟರ್ಗಳಲ್ಲಿ ಸರಿಯಾದ ಚಿಕಿತ್ಸೆ ನಡೆಸಲು ಅವರಿಗೆ ಸೂಕ್ತ ಸಲಕರಣೆ ಗಳನ್ನು ಒದಗಿಸಬೇಕು. ಆಕ್ಸಿಜನ್, ವ್ಯಾಕ್ಸಿನ್, ವೆಂಟಿಲೇಟರ್ ಕೊರತೆಗಳಿಂದಾಗಿ ಈಗಾಗಲೇ ಸಾವಿರಾರು ಜನ ಪ್ರಾಣ ಕಳೆದುಕೊಂಡ ಉದಾಹರಣೆಗಳನ್ನು ನೋಡಿದರೆ ನಾವು ಎಲ್ಲಿ ಎಡವುತ್ತಿದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
ವೈರಸ್ನಿಂದಾಗಿ ಜನತಾ ಕರ್ಫ್ಯೂ ನಡೆಸುತ್ತಿರುವುದು ಸರಿಯಾದ ಕ್ರಮವೇ. ಆದರೆ, ಇದರಿಂದಾಗಿ ಜನಸಮುದಾಯಕ್ಕೆ ಬೃಹತ್ ಪ್ರಮಾಣದ ಆದಾಯ ನಷ್ಟವಾಗಿದೆ. ಈಗಾಗಲೇ ದೇಶಾದ್ಯಂತ ಸಾವಿರಾರು ಮಕ್ಕಳು ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಬಡ ಕೂಲಿಕಾರ್ಮಿಕರು ಗಂಜಿಗೂ ಗತಿಯಿಲ್ಲದೆ ನರಳುತ್ತಿರುವುದನ್ನು ನೋಡಿದರೆ ಎಂಥವರಿಗೂ ಕರುಳು ಕಿತ್ತು ಬರುತ್ತಿದೆ ಎಂದು ಗೋವಿಂದ ರೆಡ್ಡಿ ಅವರು ಖೇದ ವ್ಯಕ್ತಪಡಿಸಿದ್ದಾರೆ.
ಕೋವಿಡ್ ವೈರಸ್ನಿಂದ ಸಾವು-ನೋವು ಕಷ್ಟ-ನಷ್ಟ ಎದುರಿಸುತ್ತಿರುವ ಸಂದರ್ಭದಲ್ಲೇ ಬ್ಲಾಕ್ ಫಂಗಸ್ ಎಂಬ ಮತ್ತೊಂದು ವೈರಸ್ ರಾಜ್ಯದಲ್ಲಿ ಕಾಲಿಟ್ಟು ಕರಾಳ ರುದ್ರನರ್ತನ ನಡೆಸುತ್ತಿರುವುದು ನಿಜಕ್ಕೂ ದುರಂತದ ವಿಚಾರ ಎಂದು ಅವರು ಹೇಳಿದ್ದಾರೆ.