ದಾವಣಗೆರೆ, ಮಾ.14- ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆ ಗುರುತಿಸಿ, ನಗರದ ತರಳಬಾಳು ಸಿಬಿಎಸ್ಇ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಕು. ಜಿ.ಜೆ.ಮನುಶ್ರೀ ಗೆ ಜಿಲ್ಲಾಡಳಿತ ಅಸಾಧಾರಣ ಪ್ರತಿಭೆ ಪ್ರಶಸ್ತಿ ನೀಡಿ ಗೌರವಿಸಿದೆ. ಜಿಲ್ಲಾಡಳಿತದ ತುಂಗಭದ್ರಾ ಸಭಾಂಗಣದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಡಿಸಿ ಮಹಾಂತೇಶ್ ಬೀಳಗಿ ಸನ್ಮಾನಿಸಿದರು. ನಗರದ ಎಚ್ಕೆಆರ್ ಸರ್ಕಲ್ನಲ್ಲಿರುವ ಸ್ವಾಮಿ ಮೆಡಿಕಲ್ಸ್ನ ಜಯರುದ್ರಸ್ವಾಮಿ ಹಾಗೂ ಸೌಮ್ಯ ದಂಪತಿ ಮಗಳು. ಪ್ರಸ್ತುತ ದಾವಣಗೆರೆಯ ನಾಟ್ಯಭಾರತಿ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಕಲಾಕೇಂದ್ರದ ವಿದುಷಿ ರಜನಿ ರಘುನಾಥ ಕುಲಕರ್ಣಿ,ಶ್ರೀಕಾಂತ್ ಕುಲಕರ್ಣಿ ಹಾಗೂ ಶ್ರೀ ನಿಧಿ ಕುಲಕರ್ಣಿ ಇವರ ಬಳಿ ಅಭ್ಯಾಸ ಮಾಡುತ್ತಿದ್ದಾರೆ.
January 24, 2025