ಜಗಳೂರು, ಮಾ.14- ತಾಲ್ಲೂಕಿನ ಕೊಡದಗುಡ್ಡದಲ್ಲಿ ಇದೇ 25 ರಿಂದ 31 ರವರೆಗೆ ನಡೆಯುವ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವವನ್ನು ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲು ಸಮಿತಿ ನಿರ್ಧರಿಸಿದ್ದು, ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಿದೆ.
ರಥೋತ್ಸವ ನಿಮಿತ್ತ ಕಳೆದ ಮಾ.1 ರಂದು ಶ್ರೀ ವೀರಭದ್ರಸ್ವಾಮಿ ಸಮಿತಿಯು ತಹಸೀಲ್ದಾರರು ಮತ್ತು ಪೊಲೀಸ್ ಉಪನಿರೀಕ್ಷಕ ರೊಂದಿಗೆ ಸಭೆ ನಡೆಸಿ ಕೊರೊನಾ ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ನಡೆಯುವ ರಥೋತ್ಸವ ಮತ್ತು ಪೂಜಾ ಕಾರ್ಯಗಳನ್ನು ಸರಳವಾಗಿ ಆಚರಿಸಲು ನಿರ್ಧರಿ ಸಿದ್ದು, ಪ್ರಸಾದ ವ್ಯವಸ್ಥೆ, ಹೋಟೆಲ್, ಅಂಗಡಿ ವ್ಯಾಪಾರ ನಡೆಯುವುದಿಲ್ಲ. ಎತ್ತಿನ ಜಾತ್ರೆ ಮತ್ತು ಜಾತ್ರೆಗೆ ಬಂದು ಉಳಿಯುವ (ಪೌಳಿ) ವ್ಯವಸ್ಥೆ ಇರುವುದಿಲ್ಲ. ಆದ್ದರಿಂದ ಭಕ್ತಾದಿಗಳು ಸಹಕರಿಸುವಂತೆ ದೇವಸ್ಥಾನ ಸಮಿತಿ ತಿಳಿಸಿದ್ದಾರೆ.