ಮಲೇಬೆನ್ನೂರು ಬಸವೇಶ್ವರ ದೇವಸ್ಥಾನ ಹುಂಡಿಯಲ್ಲಿ 1,12,715 ರೂ. ಸಂಗ್ರಹ

ಮಲೇಬೆನ್ನೂರು ಬಸವೇಶ್ವರ ದೇವಸ್ಥಾನ ಹುಂಡಿಯಲ್ಲಿ 1,12,715 ರೂ. ಸಂಗ್ರಹ - Janathavaniಮಲೇಬೆನ್ನೂರು, ಮಾ.12- ಪಟ್ಟಣದ ಶ್ರೀ ಬಸವೇಶ್ವರ ದೇವಸ್ಥಾನದ ಕಾಣಿಕೆ ಹುಂಡಿಯನ್ನು ಇಂದು ತೆರೆದು ಹಣವನ್ನು ಎಣಿಕೆ ಮಾಡಲಾಯಿತು.

ಸುಮಾರು 3 ವರ್ಷಗಳ ನಂತರ ತೆರೆದ ಕಾಣಿಕೆ ಹುಂಡಿಯಲ್ಲಿ 1,12, 715 ರೂಪಾಯಿ ಸಂಗ್ರಹವಾಗಿತ್ತು. ಹಣವನ್ನು ಮಲೇಬೆನ್ನೂರು ಎಸ್‌ಬಿಐ ಶಾಖೆಯಲ್ಲಿರುವ ದೇವಸ್ಥಾನದ ಖಾತೆಗೆ ಜಮಾ ಮಾಡಲಾಗಿದೆ ಎಂದು ಉಪತಹಶೀಲ್ದಾರ್ ಆರ್. ರವಿ ತಿಳಿಸಿದ್ದಾರೆ.

ಕಂದಾಯ ನಿರೀಕ್ಷಕ ಆನಂದ್, ಗ್ರಾಮ ಲೆಕ್ಕಾಧಿಕಾರಿಗಳಾದ ಕೊಟ್ರೇಶ್, ಶ್ರೀಧರ್, ಸುಬಾನಿ, ಬೋರಯ್ಯ, ಅಣ್ಣಪ್ಪ, ದೇವರಾಜ್, ಆನಂದತೀರ್ಥ, ದೊಡ್ಡ ಬಸವರಾಜ್, ಸೌಮ್ಯ, ಮಂಜುಳಾ, ಗ್ರಾಮ ಸಹಾಯಕರಾದ ಅಂಜಿನಪ್ಪ, ಮಾರುತಿ, ಜೈ ಮಾರುತಿ, ಸಂತೋಷ್, ಶಶಿಕುಮಾರ್, ಜಿಗಳಿ ರಂಗಸ್ವಾಮಿ, ನಾಗರಾಜ್, ಸುಜಾತ, ಚನ್ನಪ್ಪ ರಾಮಪ್ಪ ಮತ್ತು ನಾಡ ಕಚೇರಿಯ ಪ್ರದೀಪ್, ಬಸವರಾಜ್, ಪುಷ್ಪಾ ಹಿರೇಮಠ ಎಣಿಕೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!