ದಾವಣಗೆರೆ, ಜು. 29- ಭರಮಸಾಗರ ಹೋಬಳಿ ಇಸಾಮುದ್ರದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಮಹಾನಗರ ಪಾಲಿಕೆ ಸಾಯಿ ಸಮಿತಿ ಅಧ್ಯಕ್ಷರಾದ ಡಿ.ಎಸ್.ಉಮಾ ಪ್ರಕಾಶ್ ಒತ್ತಾಯಿಸಿದ್ದಾರೆ.
ಮಹಿಳೆಯರು, ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ವಿಚಾರಣೆ ವಿಳಂಬವಾದರೆ ದುಷ್ಕರ್ಮಿಗಳು, ಅತ್ಯಾಚಾರಿಗಳು, ಹಂತಕರು ಜಾಮೀನು ಪಡೆದು, ಮತ್ತಷ್ಟು ಇಂತಹ ಕೃತ್ಯ ಎಸಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಇಸಾಮುದ್ರ ಗ್ರಾಮದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿ, ಹತ್ಯೆಗೈದವರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಭಗೀರಥ ಉಪ್ಪಾರ ಸಮಾಜದ ರಾಜ್ಯ ನಾಯಕರೂ ಆದ ಉಮಾ ಪ್ರಕಾಶ್ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.