ದಾವಣಗೆರೆ, ಮೇ 18- ಆವರಗೆರೆ ಬಳಿಯ ಶ್ರೀ ಭಗವಾನ್ ಮಹಾವೀರ್ ಗೋಶಾಲೆಯಲ್ಲಿ 540 ಹಸು ಮತ್ತು ಕರುಗಳನ್ನು ಸಾಕಲಾಗು ತ್ತಿದ್ದು, ರೈತ ಬಾಂಧವರು ತಮ್ಮ ಕೈಲಾದಷ್ಟು ಮೇವು (ಹುಲ್ಲು) ಪೆಂಡಿಗಳನ್ನು ದಾನ ಮಾಡುವುದರ ಮೂಲಕ ಸಾರ್ಥಕ ಸೇವೆ ಸಲ್ಲಿಸುವಂತೆ ವಿನಂತಿಸಲಾಗಿದೆ.
ಪ್ರಾಣಿದಯಾ ಜ್ಞಾನ ಪ್ರಸಾರಕ ಸಂಘದಿಂದ ನಡೆಯುತ್ತಿರುವ ಈ ಗೋಶಾಲೆಗೆ ಈಗಾಗಲೇ ಅನೇಕ ಜನರು, ರೈತರು ಮೇವನ್ನು ದಾನ ಮಾಡುತ್ತಿದ್ದಾರೆ. ದಾನಿಗಳು ಗೋಶಾಲೆಗೆ ಹುಲ್ಲನ್ನು ನೀಡುವುದರೊಂದಿಗೆ ಹಸು ಮತ್ತು ಕರುಗಳ ರಕ್ಷಣೆಗೆ ಸಹಕರಿಸುವಂತೆ ಗೋಶಾಲೆಯ ಜಿತೇಂದ್ರ ಜೈನ್ (94485-16033), ದಿನೇಶ್ ಜೈನ್ (99803-39333) ಕೋರಿದ್ದಾರೆ.