ದಾವಣಗೆರೆ, ಮೇ 18- ಜಿಲ್ಲೆಯಲ್ಲಿ ಮಂಗಳವಾರ 594 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ನಾಲ್ವರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ದಾವಣಗೆರೆ ತಾಲ್ಲೂಕಿನಲ್ಲಿ 236, ಹರಿಹರ 96, ಜಗಳೂರು 78, ಚನ್ನಗಿರಿ 61, ಹೊನ್ನಾಳಿ 101 ಹಾಗೂ ಹೊರ ಜಿಲ್ಲೆಯ 22ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 187 ಜನರು ಗುಣಮುಖರಾಗಿದ್ದಾರೆ. ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 4447ಕ್ಕೆ ಏರಿಕೆಯಾಗಿದೆ. ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊಗ್ಗನೂರು ಕ್ರಾಸ್‌ನ 51 ವರ್ಷದ ಪುರುಷ, ಶಿರಮಗೊಂಡನಹಳ್ಳಿಯ 43 ವರ್ಷದ ಪುರುಷ ಹಾಗೂ ಎಸ್.ಎಸ್.ಐ.ಎಂ.ಎಸ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾನಗರದ ವಾಸಿಗಳಾದ 63 ವರ್ಷದ ಮಹಿಳೆ ಹಾಗೂ 75 ವರ್ಷದ ಪುರುಷ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.