ಸದರನ್ನಿಂದ ಹೊನ್ನಾಳಿ ಆಸ್ಪತ್ರೆಗೆ 40 ಆಕ್ಸಿಜನ್ ಸಿಲಿಂಡರ್ ಪಡೆದ ಎಂಪಿಆರ್
ಹರಿಹರ, ಮೇ 18-ಯಾವುದೇ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು ತಮ್ಮ ಆಸ್ಪತ್ರೆಗೆ ಬೇಕಾಗಿರುವ ಅವಶ್ಯಕತೆಗಳ ಬಗ್ಗೆ ಮಾಹಿತಿ ಹೊಂದಿದ್ದಲ್ಲಿ ಸೂಕ್ತ ಸಮಯಕ್ಕೆ ಅದನ್ನು ಪೂರೈಸುವ ಮೂಲಕ ಜೀವ ಉಳಿಸಬಹುದಾಗಿದೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಯ 40 ಕೊರೊನಾ ರೋಗಿಗಳಿಗೆ ತುರ್ತು ಆಕ್ಸಿಜನ್ ಸಿಲಿಂಡರ್ ಅವಶ್ಯಕತೆ ಇದೆ ಎಂದು ಅಲ್ಲಿನ ವೈದ್ಯಾಧಿಕಾರಿ ಚಂದ್ರಪ್ಪ ತಿಳಿಸಿದ ಕಾರಣ, ಆಕ್ಸಿಜನ್ ಸಿಲಿಂಡರ್ಗಾಗಿ ನಗರದ ಸದರನ್ ಗ್ಯಾಸ್ ಲಿ. ಕಂಪೆನಿಗೆ ತಾಲ್ಲೂಕು ಅಧಿಕಾರಿಗಳ ತಂಡದೊಂದಿಗೆ ಭೇಟಿ
ನೀಡಿದ ಸಂದರ್ಭದಲ್ಲಿ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.
ಹೊನ್ನಾಳಿ ವೈದ್ಯಾಧಿಕಾರಿ ಚಂದ್ರಪ್ಪ ಅವರು ರಾತ್ರಿ ಆಕ್ಸಿಜನ್ ಕೊರತೆ ಇರುವ ಬಗ್ಗೆ ನನ್ನ ಗಮನಕ್ಕೆ ತಂದಿದ್ದು, ತಕ್ಷಣ ಜಿಲ್ಲಾಧಿಕಾರಿಗಳ ಬಳಿ ಚರ್ಚಿಸಿ, ಪ್ರೊಬೇಷನರಿ ಉಪ ವಿಭಾಗಾಧಿಕಾರಿ ವೀರೇಶ್ ಕುಮಾರ್, ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಅವರ ಗಮನಕ್ಕೆ ತಂದು, ಇಂದು ಬೆಳಿಗ್ಗೆ 10 ಹಾಗೂ ಈಗ 20 ಆಕ್ಸಿಜನ್ ಸಿಲಿಂಡರ್ ತೆಗೆದುಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದರು.
ಬೆಳಿಗ್ಗೆ ಆಕ್ಸಿಜನ್ ಕಳುಹಿಸುವಲ್ಲಿ ಸ್ವಲ್ಪ ವ್ಯತ್ಯಾಸವಾಗಿದ್ದರೂ 40 ರೋಗಿಗಳ ಚಿಕಿತ್ಸೆ ಯಲ್ಲಿ ಸಮಸ್ಯೆ ಎದುರಾಗಿ, ಸಾವು-ನೋವುಗ ಳಾಗುವ ಹಂತಕ್ಕೆ ಹೋಗುತ್ತಿತ್ತು ಎಂದರು.
ಹೊನ್ನಾಳಿಯಲ್ಲಿ ಹೊಸದಾಗಿ
ಆಕ್ಸಿಜನ್ ಕೇಂದ್ರವನ್ನು ತುರ್ತಾಗಿ ತೆರೆಯುವುದಕ್ಕೆ ಈಗಾಗಲೇ ಕೆಸಿಎಸ್ಆರ್ ವಿಪತ್ತು ನಿರ್ವಹಣಾ ಪರಿಹಾರ ನಿಧಿಯಡಿಯಲ್ಲಿ ಮೊದಲ ಹಂತಕ್ಕೆ 65.65 ಲಕ್ಷ ರೂಪಾಯಿ ಬಿಡುಗಡೆಯಾಗಿದ್ದು, ನಾಳೆಯೇ ಗುದ್ದಲಿ ಪೂಜೆ ನೆರವೇರಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರೊಬೇಷನರಿ ಉಪ ವಿಭಾಗಧಿಕಾರಿ ವೀರೇಶ್ ಕುಮಾರ್, ತಹಶೀ ಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಪಿಎಸ್ಐ ಸುನೀಲ್ ಬಸವರಾಜ್ ತೆಲಿ ಇತರರಿದ್ದರು.