ಕೊರೊನಾಗೆ ಚಿಕಿತ್ಸೆ ಪಡೆಯಲು ಲತಾ ಕರೆ

ಹರಪನಹಳ್ಳಿ, ಮೇ 18-  ತಾಲ್ಲೂಕಿನ ತಾಳೇದಹಳ್ಳಿ  ಒಂದು  ಸಣ್ಣ ಗ್ರಾಮವಾಗಿದ್ದು,  ಬಹುತೇಕ ಹಿಂದುಳಿದ ವರ್ಗ ಮತ್ತು ಕೃಷಿ ಕೂಲಿ ಕಾರ್ಮಿಕರನ್ನು ಹೊಂದಿದೆ.

ಅಂದಾಜು 150-160 ಮನೆಗಳನ್ನು ಹೊಂದಿರುವ ಈ ಗ್ರಾಮ ಅಕ್ಷರಶಃ ಕೋವಿಡ್‌ ನಿಂದ ಹೊತ್ತಿ ಉರಿಯುತ್ತಿದೆ, ನಿನ್ನೆ ತಾನೆ  ಕಾಂಗ್ರೆಸ್ ಕಾರ್ಯಕರ್ತ ಹನುಮಂತಪ್ಪ  ಬ್ಲಾಕ್ ಫಂಗಸ್ ಗೆ ಒಳಗಾಗಿ ಅಸುನೀಗಿದ್ದು ದುರಂತ.  ಇಡೀ ಗ್ರಾಮ ಭಯಕ್ಕೆ ಒಳಗಾಗಿದ್ದು, ಗ್ರಾಮದ ಜನರ ಜೊತೆ ನಿರಂತರ ಸಂಪರ್ಕದಲ್ಲಿರುವ ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯ ದರ್ಶಿ ಎಂ.ಪಿ. ಲತಾ ಮಲ್ಲಿಕಾರ್ಜುನ್, ಇಂದು ಇಡೀ ಗ್ರಾಮಕ್ಕೆ ಫುಡ್ ಕಿಟ್ (ಆಹಾರ ಸಾಮಗ್ರಿ) ಗಳನ್ನು ವಿತರಿಸಲು ಕ್ರಮ ಕೈಗೊಂಡಿರುತ್ತಾರೆ.

ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತೂರು ಬಸವ ರಾಜ್ ಫುಡ್‌ಕಿಟ್‌ಗಳನ್ನು ಲತಾ ಅವರ ಮಾರ್ಗದರ್ಶ ನದ ಹಿನ್ನೆಲೆಯಲ್ಲಿ ವಿತರಿಸಿ, ಗ್ರಾಮದ ಜನರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿಸಿದರು. ಜನರು ಪ್ರಾರಂಭಿಕ ಹಂತದಲ್ಲೇ ಸರಿಯಾದ ಚಿಕಿತ್ಸೆ ಪಡೆಯಬೇಕು. ಜ್ವರ ಬಂದ 1 ರಿಂದ 5 ದಿನದ ಒಳಗಡೆ ಚಿಕಿತ್ಸೆ ಪಡೆಯದೇ ಹೋದರೆ, ಬೆಡ್ ಮತ್ತು ವೆಂಟಿಲೇಟರ್ ಬೇಕಾಗುತ್ತೆ ಎಂದರು. 

error: Content is protected !!