ಬೊಮ್ಮಯಿ ಮುಖ್ಯಮಂತ್ರಿ : ಜಗಳೂರಿನಲ್ಲಿ ಸಂಭ್ರಮಾಚರಣೆ

ಜಗಳೂರು, ಜು.28- ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ಬಿಜೆಪಿ  ಕಾರ್ಯಕರ್ತರು, ಪದಾಧಿಕಾರಿಗಳು, ಜನಪ್ರತಿನಿಧಿಗಳು, ಅಭಿಮಾನಿಗಳು  ಪಟ್ಟಣದ ಮಹಾತ್ಮ ಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. 

ಈ ಸಂದರ್ಭದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಹೆಚ್.ಸಿ.ಮಹೇಶ್ ಮಾತನಾಡಿ, ಜಿಲ್ಲೆಯಲ್ಲಿ ಇದುವರೆಗೂ ಎಸ್.ಟಿ. ಸಮುದಾಯಕ್ಕೆ ಸಚಿವ ಸ್ಥಾನ ಸಿಕ್ಕಿಲ್ಲ. ಜಗಳೂರು ತೀರಾ ಹಿಂದುಳಿದ ಪ್ರದೇಶವಾಗಿದ್ದು, ಈ ಕ್ಷೇತ್ರದ ಶಾಸಕ ಎಸ್‌.ವಿ.ರಾಮಚಂದ್ರ ಅವರನ್ನು ನೂತನ ಮುಖ್ಯ ಮಂತ್ರಿಗಳು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ  ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಿ.ವಿ. ನಾಗಪ್ಪ, ಜಿಲ್ಲಾ ಸಂಚಾಲಕ ಜೆ.ವಿ. ನಾಗರಾಜ್, ವಿ.ಎಸ್.ಎಸ್.ಎನ್. ಅಧ್ಯಕ್ಷ  ಬಿಸ್ತುವಳ್ಳಿ ಬಾಬು, ಪಟ್ಟಣ ಪಂಚಾಯ್ತಿ ಸದಸ್ಯರಾದ ಜೆ. ಪಾಪಲಿಂಗಪ್ಪ, ಎಸ್. ರೇವಣ್ಣ, ದೇವರಾಜ್,  ಮಂಜಣ್ಣ,  ಬಿಜೆಪಿ ಮುಖಂಡರಾದ ಗಿಡ್ಡನ ಕಟ್ಟೆ ಕಾಂತರಾಜ್, ಕೃಷ್ಣಮೂರ್ತಿ, ಇಂದ್ರೇಶ್, ಪದ್ಮ, ಗೌರಿಪುರ ಶಿವಣ್ಣ, ಜೆ.ಸಿ. ಓಬಳೇಶ್,  ಇನ್ನಿತರರಿದ್ದರು.  

error: Content is protected !!