ದಾವಣಗೆರೆ, ಮೇ 16- ಜಿಲ್ಲಾ ಲಾರಿ ಮಾಲೀಕರು ಮತ್ತು ಟ್ರಾನ್ಸ್ ಪೋರ್ಟ್ ಏಜೆಂಟರ ಸಂಘ ಹಾಗೂ ದಾವಣಗೆರೆ ಲೋಕಲ್ ಅಂಡ್ ಗೂಡ್ಶೇಡ್ ಮಾಲೀಕರ ಸಂಘದ ವತಿಯಿಂದ ಸೈಯ್ಯದ್ ಸೈಫುಲ್ಲಾ ಅವರ ಅಧ್ಯಕ್ಷತೆಯಲ್ಲಿ ಕೊರೊನಾ ಲಾಕ್ಡೌನ್ನಿಂದಾಗಿ ಸತತವಾಗಿ 11ನೇ ದಿನವಾದ ಇಂದು 250 ಊಟದ ಪೊಟ್ಟಣಗಳು, ನೀರಿನ ಬಾಟಲ್ ಮತ್ತು ಮಾಸ್ಕ್ ಅನ್ನು ಲಾರಿ ಚಾಲಕರಿಗೆ ರಾಷ್ಟ್ರೀಯ ಹೆದ್ದಾರಿ 4 ಹೊನ್ನೂರು ಗೊಲ್ಲರಹಟ್ಟಿಯ ಬಳಿ ವಿತರಿಸಲಾಯಿತು.
ಎಸ್.ಕೆ.ಮಲ್ಲಿಕಾರ್ಜುನ್, ಕೆ.ಎಂ.ಕುಮಾರ್, ಟೈರ್ ಶಫಿವುಲ್ಲಾ, ಮರುಫ್, ಖಲೀಮುಲ್ಲಾ, ಮುರ್ತುಜಾ, ಮಲ್ಲಿಕಾರ್ಜುನ ಟ್ರಾನ್ಸ್ಫೋರ್ಟ್ ವಿಜಯ್, ಗಫೂರ್, ಅಮ್ಜದ್, ಮುಸ್ತಫಾ ಮತ್ತಿತರರು ಉಪಸ್ಥಿತರಿದ್ದರು.