ಹೊನ್ನಾಳಿ, ಮೇ 16- ಬಸವ ಜಯಂತಿ ಪ್ರಯುಕ್ತ ಮಾದನಬಾವಿಯ ಕೋವಿಡ್ ಕೇರ್ ಸೆಂಟರ್ ಹಾಗೂ ಹೊನ್ನಾಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಹೋಳಿಗೆ ಉಣ ಬಡಿಸುವ ಮೂಲಕ ಸೋಂಕಿತರ ಮೊಗದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮಂದಹಾಸ ಮೂಡಿಸಿದರು. ಈ ಸಂದರ್ಭದಲ್ಲಿ ಶಾಸಕರ ಪತ್ನಿ ಸುಮಾ ರೇಣುಕಾಚಾರ್ಯ, ಪುರಸಭಾಧ್ಯಕ್ಷ ಕೆ.ವಿ.ಶ್ರೀಧರ್, ಜಿ.ಪಂ.ಸದಸ್ಯ ಸುರೇಂದ್ರನಾಯ್ಕ, ವೈದ್ಯಾಧಿಕಾರಿಗಳು ಸೇರಿದಂತೆ ದಾದಿಯರಿದ್ದರು.
December 23, 2024