ಕೂಡ್ಲಿಗಿ, ಮೇ 16- ತಾಲ್ಲೂಕಿನ ಶ್ರೀಕಂಠಾಪುರ ಗ್ರಾಮದಲ್ಲಿ ತಂದೆ-ತಾಯಿ ಇಬ್ಬರಿಗೂ ಕೊರೊನಾ ಸೋಂಕು ಹರಡಿದ್ದರಿಂದ 5 ವರ್ಷದ ಗಂಡು ಮಗು ತಂದೆ, ತಾಯಿ ಇದ್ದೂ ಮನೆಯಲ್ಲಿ ಅನಾಥನಂತೆ ಜೀವನ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಸಿಡಿಪಿಓ ನಾಗನಗೌಡ ಗ್ರಾಮಕ್ಕೆ ಭೇಟಿ ನೀಡಿ ಅಂಗನವಾಡಿ ಕೇಂದ್ರದಿಂದ ಈ ಕುಟುಂಬಕ್ಕೆ ತಿಂಗಳಿಗೆ ಆಗುವಷ್ಟು ಆಹಾರ ನೀಡಿರುವುದಲ್ಲದೇ ಗ್ರಾಮದ ಕೋವಿಡ್ ಸೋಂಕಿತರಿಗೂ ಅಂಗನವಾಡಿ ಕೇಂದ್ರದಲ್ಲಿ ದಾಸ್ತಾನಾಗಿದ್ದ ಆಹಾರ ಸಾಮಗ್ರಿಗಳನ್ನು ವಿತರಿಸಿದ್ದಾರೆ. ಶ್ರೀಕಂಠಾಪುರ ತಾಂಡಾದ ಗಂಗಾಧರ (32) ಸಾವಿತ್ರಿಬಾಯಿ (30) ಇಬ್ಬರೂ ಕೊರೊನಾದಿಂದ ಬಳಲುತ್ತಿದ್ದಾರೆ.
December 23, 2024