ದಾವಣಗೆರೆ, ಮೇ 9- ಚನ್ನಗಿರಿ ಶ್ರೀ ಕೇದಾರ ಲಿಂಗೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಖಡ್ಗ ಸಂಘಟನೆಯಿಂದ ಚನ್ನಗಿರಿ ತಾಲ್ಲೂಕಿನ ಸಂತೆಬೆನ್ನೂರಿನಲ್ಲಿ ಇಂದು ಕೊರೊನಾ ಜಾಗೃತಿ ಅಭಿಯಾನ ನಡೆಸಲಾಯಿತು. ಪಾದಯಾತ್ರೆ ಮೂಲಕ ಶ್ರೀಗಳು ಜನರಲ್ಲಿ ಜಾಗೃತಿ ಮೂಡಿಸಿದರು.
ಮಾಸ್ಕ್ ಹಾಕಿ ಸರ್ಕಾರದ ನಿರ್ದೇಶನ ಪಾಲನೆ ಮಾಡುವಂತೆ ಹಾಗೂ ಕೊರೊನಾವನ್ನು ನಿಯಂತ್ರಣ ಮಾಡಲು ಸಹಕರಿಸಿ ಎಂದು ಜನರಲ್ಲಿ ಮನವಿ ಮಾಡಿದರು.
ಸಂತೇಬೆನ್ನೂರು ಪೊಲೀಸರು ಸೇರಿದಂತೆ ಖಡ್ಗ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದ್ದರು.