ದಾವಣಗೆರೆ, ಮೇ 9- ವಿಶ್ವ ರೆಡ್ ಕ್ರಾಸ್ ದಿನಾಚರಣೆ ಅಂಗವಾಗಿ ರೆಡ್ಕ್ರಾಸ್ ಸಂಸ್ಥಾಪಕ ಜೀನ್ ಹೆನ್ರಿ ಡುನಾಂಟ್ ಜನ್ಮ ದಿನಾಚರಣೆ ಯನ್ನು ನಗರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯಿಂದ ಇಲ್ಲಿನ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿರುವ ಕೋವಿಡ್ ರೋಗಿಗಳಿಗೆ ಅವಶ್ಯವಿರುವ ಸುಮಾರು 1 ಲಕ್ಷ ರೂ. ಮೊತ್ತದ ಔಷಧಿ ಮಾತ್ರೆಗಳನ್ನು ನೀಡುವ ಮೂಲಕ ಆಚರಿಸಲಾಯಿತು.
ಜಿಲ್ಲಾಸ್ಪತ್ರೆಯ ಕ್ವಾರ್ಟಸ್ನಲ್ಲಿರುವ ವೈದ್ಯರಿಗೆ 30 ಸಾವಿರ ರೂ. ಮೊತ್ತದ ದಿನಬಳಕೆಗೆ ಬೇಕಾದ ಬಕೆಟ್, ಮಗ್, ಪಿಲ್ಲೋ ಕವರ್, ಸೊಳ್ಳೆ ಓಡಿಸಲು ಆಲ್ಔಟ್ಗಳನ್ನು ಆಸ್ಪತ್ರೆ ಮುಖ್ಯಸ್ಥರಿಗೆ ನೀಡಲಾಯಿತು ಎಂದು ಸಂಸ್ಥೆ ಚೇರ್ಮನ್ ಡಾ.ಎ.ಎಂ.ಶಿವಕುಮಾರ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಸ್ಥೆ ಕಾರ್ಯದರ್ಶಿ ಡಿ.ಎಸ್. ಸಾಗರ್, ಗೌರವ ಕಾರ್ಯದರ್ಶಿ ಸಿ.ಎ. ಉಮೇಶ ಶೆಟ್ಟಿ, ಖಜಾಂಚಿ ಅನಿಲ್ ಬಾರೆಂಗಳ್ ಮತ್ತಿತರರು ಉಪಸ್ಥಿತರಿದ್ದರು.