ಮಲೇಬೆ ನ್ನೂರು, ಮೇ 9- ಪಟ್ಟಣದಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘನೆ ಮಾಡಿ ಅನಧಿಕೃತವಾಗಿ ಸಂಚರಿಸುತ್ತಿದ್ದ 10 ಬೈಕ್ ಹಾಗೂ 4 ಕಾರ್‌ಗಳನ್ನು ಗ್ರಾಮಾಂತರ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ್ ಅವರ ನೇತೃತ್ವದಲ್ಲಿ ಸಿಪಿಐ ಸತೀಶ್, ಪಿಎಸ್‌ಐ ವೀರಬಸಪ್ಪ ಕುಸುಲಾಪುರ ಅವರು ಸೀಜ್ ಮಾಡಿ, ಕೇಸು ದಾಖಲಿಸಿದ್ದಾರೆ.
ಪಟ್ಟಣದ ಮುಖ್ಯರಸ್ತೆ, ಸಂತೆ ರಸ್ತೆ, ನಂದಿಗುಡಿ ರಸ್ತೆ ಪೇಟೆ ಬೀದಿಯಲ್ಲಿ ಬೆಳಿಗ್ಗೆ 10 ಗಂಟೆಯ ನಂತರ ವಿನಾಕಾರಣ ಸಂಚರಿಸುತ್ತಿದ್ದ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎಚ್ಚರಿಕೆ : ಸೋಮವಾರದಿಂದ ಸಂಪೂರ್ಣ ಲಾಕ್‌ಡೌನ್ ಜಾರಿಯಾಗಲಿದ್ದು, ಈ ವೇಳೆ ಯಾರಾದರೂ ನಿಯಮ ಉಲ್ಲಂಘಿಸಿದರೆ ಶಿಸ್ತು ಕ್ರಮ ಗ್ಯಾರೆಂಟಿ ಎಂಬ ಎಚ್ಚರಿಕೆಯನ್ನು ಪಿಎಸ್‌ಐ ವೀರಬಸಪ್ಪ ಅವರು ವಾಹನ ಚಾಲಕರಿಗೆ ನೀಡಿದ್ದಾರೆ.