ಜೀವದ ಜೊತೆ ಚೆಲ್ಲಾಟ ಬೇಡ: ರಂಭಾಪುರಿ ಶ್ರೀ

ಬಾಳೆಹೊನ್ನೂರು, ಮೇ 9- ಕೊರೊನಾ ವೈರಸ್ 2ರ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ನಿಯಂತ್ರಣಕ್ಕೆ ಬರುವುದು ಕಷ್ಟದಾಯಕವಾಗಿದೆ. ರಾಜ್ಯದಲ್ಲಿ ದಿನಕ್ಕೆ 50 ಸಾವಿರದಷ್ಟು ಸೋಂಕಿತರು ಪತ್ತೆಯಾಗುತ್ತಿದ್ದು ಜನರು ಜೀವದ ಜೊತೆಗೆ ಚೆಲ್ಲಾಟ ಆಡುವುದನ್ನು ನಿಲ್ಲಿಸಿ ಕೋವಿಡ್ ನಿಯಮಗಳನ್ನು ಪಾಲಿಸುವುದು ಅಗತ್ಯವಾಗಿದೆ ಎಂದು ಶ್ರೀಮದ್ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಇಂದು ಸರ್ಕಾರಿ ವೈದ್ಯರಿಂದ ಕೋವಿಡ್ 2ನೇ ಹಂತದ ಲಸಿಕೆ ಪಡೆದ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಬೆಂಗಳೂರಿನಂತಹ ಮಹಾ ನಗರದಲ್ಲಿ ಬೆಡ್ ದೊರೆಯುತ್ತಿಲ್ಲ. ಆಕ್ಸಿಜನ್ ಸಿಗುತ್ತಿಲ್ಲ. ಪರಿಸ್ಥಿತಿ ಬಹಳ ಗಂಭೀರವಾಗಿದ್ದು, ಪ್ರತಿಯೊ ಬ್ಬರೂ ಅನಾವಶ್ಯಕ ಓಡಾಟ ತಪ್ಪಿಸಬೇಕು. ಮಾಸ್ಕ್ ಧಾರಣೆ, ಸ್ಯಾನಿಟೈಜೇಶನ್‍ಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಜೊತೆಗೆ ಸರಕಾರದವರು ಉಚಿತವಾಗಿ ನೀಡುತ್ತಿರುವ ಕೋವಿಡ್ ಲಸಿಕೆಯನ್ನು 2 ಹಂತಗಳಲ್ಲಿ ಪಡೆಯಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವುದರೊಂದಿಗೆ ಸ್ವಯಂ ನಿಯಂತ್ರಣಕ್ಕೆ ಒಳಪಡಬೇಕು. ತಮ್ಮ ತಮ್ಮ ಕುಟುಂಬದವರ ರಕ್ಷಣೆಯ ಬಗ್ಗೆ ಗಂಭೀರ ಚಿಂತನೆ ಮಾಡಿ ಸುರಕ್ಷತೆಯನ್ನು ಪಾಲಿಸಿಕೊಂಡು ಬರಬೇಕೆಂದು ಶ್ರೀ ರಂಭಾಪುರಿ ಜಗದ್ಗುರುಗಳು ಕರೆ ನೀಡಿದ್ದಾರೆ.

error: Content is protected !!