ಸಂತಪೌಲರ ವಿದ್ಯಾಸಂಸ್ಥೆ ವೆಬ್‌ಸೈಟ್‌ ಉದ್ಘಾಟನೆ

ದಾವಣಗೆರೆ, ಮಾ.10- 75 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ನಗರದ ಸಂತಪೌಲರ ವಿದ್ಯಾಸಂಸ್ಥೆಯಿಂದ ಬುಧವಾರ ಸಂಸ್ಥೆಯ ವೆಬ್‌ಸೈಟ್‌ಗೆ ಚಾಲನೆ ನೀಡಲಾಯಿತು.

ಸಂತಪೌಲರ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಮುಖ್ಯಸ್ಥರಾದ ಸಿ.ಅನುಪಮ ಅವರು www.stpaulsinstitution.com ವೆಬ್ ಸೈಟ್ ಲೋಕಾರ್ಪಣೆಗೊಳಿಸಿದರು.

ಹಿರಿಯ ಸಿಸ್ಟರ್ ಪ್ಲಾನ್ಸ್‌ಲಿನ್, ಪ್ರೌಢಶಾಲೆಯ ಮುಖ್ಯಸ್ಥರಾದ ಸಿ.ಬರ್ನಿ, ಕನ್ನಡ ಮಾಧ್ಯಮದ ಮುಖ್ಯಸ್ಥರಾದ ಸಿ.ಸುಜಯ, ಇಂಗ್ಲಿಷ್ ಮಾಧ್ಯಮದ ಮುಖ್ಯಸ್ಥರಾದ ಸಿ.ರೀನಿ, ಸಿಬಿಎಸ್‌ಸಿ ವಿಭಾಗದ ಮುಖ್ಯಸ್ಥರಾದ ಸಿ.ನಿರ್ಮಲ ಹಾಗೂ ಹಳೆಯ ವಿದ್ಯಾರ್ಥಿನಿಯರಾದ ಡಾ.ಶುಕ್ಲ, ಶ್ರೀಮತಿ ವಾಸಂತಿ ಪಲ್ಲಾಗಟ್ಟೆ ಇತರರು ಉಪಸ್ಥಿತರಿದ್ದರು.

ಹಿರಿಯ ಶಿಕ್ಷಕಿ ಎಂ.ಕೆ. ಮಂಜುಳ ಸಂಸ್ಥೆ ಹಾಗೂ ವೆಬ್‌ಸೈಟ್ ಕುರಿತು ಮಾತನಾಡಿದರು. ಶಿಕ್ಷಕರಾದ ಎ.ಕಿರಣ್, ಬಿ.ಎಸ್. ರುದ್ರೇಶ್ ಕಾರ್ಯಕ್ರಮ ನಿರ್ವಹಿಸಿದರು. ಎಲಿಜಾ ದೇವರ ವಾಕ್ಯ ನುಡಿದರು. ಭಾಗ್ಯನಾಥನ್ ಪ್ರಾರ್ಥಿಸಿದರು. ವಿದ್ಯಾ ಸ್ವಾಗತಿಸಿದರು. ನಯನ ವಂದಿಸಿದರು.

1946 ರಲ್ಲಿ ಕೇವಲ 6 ವಿದ್ಯಾರ್ಥಿಗಳಿಂದ ಆರಂಭಗೊಂಡ ಈ ಸಂಸ್ಥೆಗೆ ಈಗ 75 ರ ಹರೆಯ. ಇದೀಗ 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಶಾಲೆಯಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ಶಿಕ್ಷಣ, ಕ್ರೀಡೆ, ಸಮಾಜ ಸೇವೆ, ವೈದ್ಯಕೀಯ, ಪೊಲೀಸ್‌ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಅರ್ಜುನ ಪ್ರಶಸ್ತಿ ವಿಜೇತೆ ಎಂಜಲ್‌ ಮೇರಿ, ಖೋ-ಖೋ ಪಂದ್ಯದಲ್ಲಿ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿದ ಆರತಿ, ಹೃದಯ ಮೇರಿ, ಶಾಂತಾ ಪಲ್ಲಾಗಟ್ಟೆ, ಇಸ್ರೋ ವಿಜ್ಞಾನಿ ಡಾ. ಹೇಮಲತಾ, ಡಿಐಜಿ ರೂಪ, ಭಾರತ್‌ ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ಸಂಸ್ಥೆ ಆಯುಕ್ತರಾದ ಪುಟ್ಟಮ್ಮ, ಮುಖ್ಯ ಆಯುಕ್ತ ಮುರುಘ ರಾಜೇಂದ್ರ ಚಿಗಟೇರಿ ಸೇರಿದಂತೆ ಅನೇಕರು ಈ ಶಾಲೆಯ ಹಳೆಯ ವಿದ್ಯಾರ್ಥಿಗಳಾಗಿದ್ದು ಹೆಮ್ಮೆಯ ಸಂಗತಿಯಾಗಿದೆ ಎಂದು ಶಿಕ್ಷಕಿ ಎಂ.ಕೆ. ಮಂಜುಳಾ ವಿವರಿಸಿದರು.

error: Content is protected !!