ಹರಪನಹಳ್ಳಿ, ಮೇ 7- ಸಂಸದ ವೈ. ದೇವೇಂದ್ರಪ್ಪ ಅವರು ತಾಲ್ಲೂ ಕಿನ ಅರಸೀಕೆರೆ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ತಮ್ಮ ಹುಟ್ಟುಹಬ್ಬವನ್ನು ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಿ ಸರಳವಾಗಿ ಆಚರಿಸಿಕೊಂಡರು. ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು ಇರುವುದಿಲ್ಲ. ಮಾಸ್ಕ್, ಸ್ಯಾನಿಟೈಸರ್, ರಾಪಿಡ್ ಕಿಟ್ ಇಲ್ಲ, ಔಷಧೋಪಕರಣಗಳು ಇಲ್ಲದಿರುವುದನ್ನು ಕಂಡು ದೇವೇಂದ್ರಪ್ಪ ಅವರು ವೈದ್ಯಾಧಿಕಾರಿಗಳ ಹಾಗೂ ಸಿಬ್ಬಂದಿಯವರ ಮೇಲೆ ಗರಂ ಆದರು. ಮುಂದೆ ಈ ರೀತಿ ಯಾವುದೇ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಲು ಸೂಚಿಸಿದರು. ಆಸ್ಪತ್ರೆಯಲ್ಲಿನ ಆಕ್ಸಿಜನ್ ಕೊಠಡಿಯನ್ನು ಕಳಪೆಯಾಗದಂತೆ ನಿರ್ಮಿಸಬೇಕೆಂದು ಸಂಬಂಧ ಪಟ್ಟ ಇಲಾಖೆಗೆ ಎಚ್ಚರಿಕೆ ನೀಡಿದರು. ಇದೇ ಸಂದರ್ಭದಲ್ಲಿ ವೈದ್ಯಾಧಿಕಾರಿ ಭುವನೇಶ್ವರ್, ಮುಖಂಡರಾದ ಷಣ್ಮುಖಪ್ಪ, ವೈ. ಟಿ. ಕೊಟ್ರೇಶ್, ಪೂಜಾರ್ ಮರಿಯಪ್ಪ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.
January 12, 2025