ಜಗಳೂರು, ಮೇ 7- ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಆಸ್ತಿ ಮಾಲೀಕರಿಗೆ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಶೇ. 5 ರ ರಿಯಾಯಿತಿಯಲ್ಲಿ ಪಾವತಿಸಲು ಏಪ್ರಿಲ್ ಅಂತ್ಯದವರೆಗೆ ಕಾಲಾವಕಾಶ ನೀಡಲಾಗಿತ್ತು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆ ಮೇಲಿನ ಶೇ. 5 ರಿಯಾಯ್ತಿಯನ್ನು ಸರ್ಕಾರದ ಆದೇಶದಂತೆ ಜೂನ್ 30 ರವರೆಗೆ ವಿಸ್ತರಿಸಲಾಗಿರುತ್ತದೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜು ಡಿ. ಬಣಕಾರ್ ತಿಳಿಸಿದ್ದಾರೆ.
January 12, 2025