ಪ್ರೀತಿ, ವಿಶ್ವಾಸದ ವಾತಾವರಣ ನಿರ್ಮಿಸಿ

ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಮಹಿಳಾ ದಿನಾಚರಣೆಯಲ್ಲಿ ಕಮಲಾ ಹಂಪನಾ

ದಾವಣಗೆರೆ, ಮಾ. 9- ಸಮಾಜದಲ್ಲಿ ಪ್ರತಿ ಮಹಿಳೆಗೂ ಬದುಕುವ ಸ್ವಾತಂತ್ರ್ಯ, ಸ್ವಾಭಿಮಾನ ಇದೆ. ದೌರ್ಜನ್ಯ, ಶೋಷಣೆ ಬಿಟ್ಟು ಪ್ರೀತಿ, ವಿಶ್ವಾಸದಿಂದ ಗೌರವಯುತವಾಗಿ ಬಾಳುವ ವಾತಾವರಣ ನಿರ್ಮಿಸುವುದು ಎಲ್ಲರ ಜವಾಬ್ದಾರಿ ಎಂದು ಹಿರಿಯ ಸಾಹಿತಿ ಡಾ. ಕಮಲಾ ಹಂಪನಾ ಸಲಹೆ ನೀಡಿದರು.

ದಾವಣಗೆರೆ ವಿಶ್ವವಿದ್ಯಾನಿಲಯ ಐಕ್ಯೂಎಸಿ ಮತ್ತು ಮಹಿಳಾ ಅಧ್ಯಯನ ಕೇಂದ್ರದ ವತಿಯಿಂದ ಸೋಮವಾರ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜೀವನದ ಪಯಣದಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಇದೊಂದು ಬಂಡಿ ಇದ್ದಂತೆ ಸ್ವಲ್ಪ ವ್ಯತ್ಯಾಸವಾದರೂ ಸಂಚಾರಕ್ಕೆ ಅಡ್ಡಿಯಾಗುತ್ತದೆ. 

ಹಾಗಾಗಿ ಸಮಾನತೆ, ಪರಸ್ಪರ ವಿಶ್ವಾಸ, ಆತ್ಮೀಯ ಸಂಬಂಧದೊಂದಿಗೆ ಬದುಕುವುದು ಮುಖ್ಯ ಎಂದು ಸಲಹೆ ನೀಡಿದರು.

ಕೊರೊನಾ ವಾರಿಯರ್ ಜೆಜೆಎಂ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕಿ ಡಾ. ಎ.ಎಂ.ಶಿಲ್ಪಶ್ರೀ, ಆರೋಗ್ಯ ಸಹಾಯಕಿ ರತ್ನಮ್ಮ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕಮಲಾ ಹಂಪನಾ, ಕೊರೊನಾ ವಾರಿಯರ್ಸ್ ಡಾ. ಶಿಲ್ಪಶ್ರೀ, ದಾದಿ ರತ್ನಮ್ಮ ಅವರನ್ನು ವಿಶ್ವವಿದ್ಯಾನಿಲಯದ ವತಿಯಿಂದ ಸನ್ಮಾನಿಸಲಾಯಿತು.

ಸಿಂಡಿಕೇಟ್ ಸದಸ್ಯೆ ವಿಜಯಲಕ್ಷ್ಮಿ ಹಿರೇಮಠ, ಕುಲಸಚಿವೆ ಪ್ರೊ. ಗಾಯತ್ರಿ ದೇವರಾಜ್, ಪರೀಕ್ಷಾಂಗ ಕುಲಸಚಿವೆ ಪ್ರೊ. ಎಚ್.ಎಸ್. ಅನಿತಾ ಮಾತನಾಡಿದರು. ಹಣಕಾಸು ಅಧಿಕಾರಿ ಡಿ. ಪ್ರಿಯಾಂಕ ಉಪಸ್ಥಿತರಿದ್ದರು. ಡಾ. ನಾಗಸ್ವರೂಪ, ಡಾ. ಎಚ್.ವಿ.ಶಾಂತರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಟಿ.ಎಲ್.ಪ್ರವೀಣ್ ವಂದಿಸಿದರು. ಡಾ.ಭೀಮಾಶಂಕರ ಜೋಶಿ ನಿರೂಪಿಸಿದರು.

error: Content is protected !!