ಹರಿಹರ, ಮೇ 7- ನಗರದ ಗುತ್ತೂರು ಬಳಿ ಇರುವ ಕೋವಿಡ್ ಕೇರ್ ಸೆಂಟರ್, ಸದರನ್ ಗ್ಯಾಸ್ ಏಜೆನ್ಸಿ, ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಸಂಸದ ಜಿ.ಎಂ. ಸಿದ್ದೇಶ್ವರ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್ಪಿ ಹನುಮಂತರಾಯ, ಎಸಿ ಮಮತಾ ಹೊಸಗೌಡ್ರು ಅವರುಗಳು ಭೇಟಿ ನೀಡಿ, ಇಲ್ಲಿನ ವ್ಯವಸ್ಥೆಯ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ, ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ನಾಗರಾಜ್, ನಟರಾಜ್, ರಾಘವನ್, ತಹಶೀಲ್ದಾರ್ ಕೆ. ಬಿ. ರಾಮಚಂದ್ರಪ್ಪ, ಪೌರಾಯುಕ್ತೆ ಎಸ್. ಲಕ್ಷ್ಮಿ, ಸಿಪಿಐ ಸತೀಶ್ ಕುಮಾರ್, ಆರೋಗ್ಯ ಅಧಿಕಾರಿ ಡಾ. ಚಂದ್ರಮೋಹನ್, ಡಾ. ವಿಶ್ವನಾಥ, ಡಾ. ಸವಿತಾ, ಡಾ. ಹನುಮನಾಯ್ಕ್, ಪಿಎಸ್ಐಗಳಾದ ಸುನಿಲ್ ಬಸವರಾಜ್, ಡಿ. ರವಿಕುಮಾರ್, ನಗರಸಭೆ ಎಇಇ ಬಿರಾದಾರ್, ಪಿಡಿಓ ವಿಜಯಲಕ್ಷ್ಮಿ ಇನ್ನಿತರರು ಹಾಜರಿದ್ದರು.