ಕಸಾಪ ಚುನಾವಣೆ ಮುಂದೂಡಿಕೆ ಸರ್ಕಾರದ ನಿರ್ಧಾರ ಸ್ವಾಗತಾರ್ಹ

ಕಸಾಪ ಚುನಾವಣೆ ಮುಂದೂಡಿಕೆ ಸರ್ಕಾರದ ನಿರ್ಧಾರ ಸ್ವಾಗತಾರ್ಹ - Janathavaniದಾವಣಗೆರೆ, ಮೇ 7- ಕೋವಿಡ್-19ರ ಎರಡನೇ ಅಲೆಯು ತೀವ್ರವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ  ನಾಡಿದ್ದು ದಿನಾಂಕ 9ರಂದು ನಡೆಯಬೇಕಿದ್ದ ಕಸಾಪ ಚುನಾವಣೆಯನ್ನು ರಾಜ್ಯ ಸರ್ಕಾರ ಮುಂದೂಡಿ ಆದೇಶಿಸಿರುವುದು ಸ್ವಾಗತಾರ್ಹ ಎಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ. ವಾಮದೇವಪ್ಪ ತಿಳಿಸಿದ್ದಾರೆ.

ಕೋವಿಡ್ ಸೋಂಕು ಹೆಚ್ಚುತ್ತಿರುವುದನ್ನು ತಡೆಗಟ್ಟುವುದು ಎಷ್ಟು ಮುಖ್ಯವೋ, ಮಹಾಮಾರಿಯಿಂದ ಯಾರೊಬ್ಬರ ಪ್ರಾಣಹಾನಿಯಾಗದಂತೆ ನೋಡಿಕೊಳ್ಳುವುದು ಅಷ್ಟೇ ಮುಖ್ಯ. ಮತದಾರ ಕನ್ನಡ ಬಂಧುಗಳಿಗೆ ಈ ಸೋಂಕಿನಿಂದ ಯಾವುದೇ ಜೀವ ಹಾನಿ ಅಥವಾ ಯಾರೂ ಸೋಂಕಿಗೆ ಸಿಲುಕಿಕೊಳ್ಳಬಾರದೆಂಬುದು ನಮ್ಮ ಉದ್ದೇಶವಾಗಿದೆ.  ನಾವೆಲ್ಲರೂ ಕೊರೊನಾ ವಾರಿಯರ್ಸ್‍ಗಳಾಗಿ ಅದರ ನಿಯಂತ್ರಣಕ್ಕೆ ಶ್ರಮಿಸೋಣ. ಅದೇ ನಾವು ತೋರುವ ಕನ್ನಡ ಪ್ರೇಮ, ದೇಶಪ್ರೇಮವೆಂದು ಕರೆ ಕೊಟ್ಟರು. ಈ ಚುನಾವಣೆಯಲ್ಲಿ ತಮ್ಮ ಗೆಲುವಿಗಾಗಿ ಶ್ರಮಿಸುತ್ತಿದ್ದ ಹಾಗೂ ಮತದಾನ ಮಾಡಲು ಕಾತರರಾಗಿದ್ದ ಅಪಾರ ಸಂಖ್ಯೆಯ ಕನ್ನಡ ಮನಸ್ಸುಗಳಿಗೆ ನಾನು ತುಂಬಾ ಆಭಾರಿಯಾಗಿದ್ದೇನೆ ಎಂದು ವಾಮದೇವಪ್ಪ ತಿಳಿಸಿದರು. 

error: Content is protected !!