ದಾವಣಗೆರೆ, ಮೇ 7- ಇಲ್ಲಿನ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಆಶ್ರಯದಲ್ಲಿ ಸೇವಾ ಭಾರತಿ ಟ್ರಸ್ಟ್ ವತಿಯಿಂದ ಕೊರೊನಾ ಪೀಡಿತರಿಗೆ ಉಚಿತ ಆಂಬ್ಯುಲೆನ್ಸ್ ಸೇವೆಗೆ ನಗರದಲ್ಲಿ ಇಂದು ಚಾಲನೆ ದೊರೆಯಿತು. ಮಹಾಪೌರ ಎಸ್.ಟಿ. ವೀರೇಶ್ ಈ ಸೇವೆಗೆ ಚಾಲನೆ ನೀಡಿದರು.
ಉಚಿತ ಸೇವೆಗಾಗಿ 9844385322 ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಸಂಘದ ವರು ಕೋರಿದ್ದಾರೆ. ರಾಷ್ಟ್ರೋತ್ಥಾನ ಸಂಸ್ಥೆಯ ಕಾರ್ಯ ದರ್ಶಿ ಹೆಚ್. ಜಯಣ್ಣ, ಸದಸ್ಯ ವಿನಾಯಕ ರಾನಡೆ, ಸಂಘದ ವಿಭಾಗ ಸೇವಾ ಪ್ರಮುಖ ಸಿದ್ದಲಿಂಗಸ್ವಾಮಿ, ಅರುಣ ಗುಡ್ಡದ ಕೇರಿ, ಅಜಿತ್, ಸಂಪತ್ ಇದ್ದರು.