ಗಾಳಿ, ಮಳೆಯಿಂದ ಭತ್ತಕ್ಕೆ ಹಾನಿ

ಹರಿಹರ, ಮೇ 6- ತಾಲ್ಲೂಕಿನಲ್ಲಿ ಕಳೆದ ಏಳೆಂಟು ದಿನಗಳಿಂದ ತೀವ್ರತರನಾದ ಗಾಳಿ ಸಹಿತ ಮಳೆಯಾಗುತ್ತಿದ್ದು, ಬೇಸಿಗೆ ಹಂಗಾಮಿನಲ್ಲಿ ಬೆಳೆದ ಭತ್ತವು ಹಾನಿಗೊಳಗಾಗಿದೆ.

ವಾಡಿಕೆ ಮಳೆಗಿಂತ ಶೇ. 57 ರಷ್ಟು ಹೆಚ್ಚಿನ ಮಳೆಯಾಗಿದ್ದು,  ಈವರೆಗೆ ಆದಂತಹ ಗಾಳಿ ಸಹಿತ ಮಳೆಗೆ 32 ಗ್ರಾಮಗಳಿಂದ 754 ಹೆಕ್ಟೇರ್ ಭತ್ತಕ್ಕೆ ಹಾನಿಯಾಗಿ ಸುಮಾರು ಒಂದು ಕೋಟಿಯಷ್ಟು ನಷ್ಟವಾಗಿದೆ. ಸಂಕಷ್ಟದಲ್ಲಿರುವ ಬೆಳೆಯನ್ನು ಉಳಿಸಿಕೊಳ್ಳಲು ರೈತರು ಅಗತ್ಯ ಕ್ರಮವನ್ನು ತಕ್ಷಣವೇ ಕೈಗೊಳ್ಳಬೇಕಿದೆ.

ಕಟಾವಿಗೆ ಸಿದ್ಧವಿರುವ ಭತ್ತವನ್ನು ಸೂಕ್ತ ಸಮಯ ನೋಡಿ ಕಟಾವು ಮಾಡಿ ಸಂಗ್ರಹಿಸಿಟ್ಟುಕೊಳ್ಳುವುದು. ಜಮೀನಿನಲ್ಲಿ ನಿಂತ ನೀರನ್ನು ಹೊರ ಹಾಕಲು ಕಾಲುವೆ ನಿರ್ಮಿಸಿ, ಹೆಚ್ಚಿನ ಪ್ರಮಾಣದಲ್ಲಿ ತುರ್ತಾಗಿ ನೀರು ಹೊರ ಬಿಡುವುದು, ಕೂಲಿಕಾರರ ಮುಖಾಂತರ ಭತ್ತವನ್ನು ಕಟಾವು ಮಾಡುವುದರಿಂದ ಕಾಳು ಉದುರುವ ಪ್ರಮಾಣ ಕಡಿಮೆಯಾಗುವುದು.

ಕೃಷಿ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಗಳು ಈಗಾಗಲೇ ಜಂಟಿ ಸಮೀಕ್ಷೆ ಕೈಗೊಂಡಿದ್ದು, ನಷ್ಟ ಅನುಭವಿಸಿದ ಪ್ರತಿ ರೈತರ ಯಾದಿಯನ್ನು ಸಿದ್ಧಪಡಿಸಲಾಗುತ್ತಿದೆ. ಬೇಸಿಗೆ ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯಕ್ರಮದಡಿ ರೈತರು ತಾವು ಬೆಳೆದ ಬೆಳೆ ದಾಖಲೀಕರಣಗೊಳಿಸದೇ ಇದ್ದಲ್ಲಿ ತಕ್ಷಣವೇ ಸಮೀಕ್ಷೆ ಆಪ್‌ನಲ್ಲಿ ಬೆಳೆ ನೋಂದಣಿ ಮಾಡಿಕೊಳ್ಳುವುವಂತೆ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

error: Content is protected !!