ಕೊರೊನಾ : ತುರ್ತು ಸೇವಾ ವಾಹನಕ್ಕೆ ಹಸಿರು ನಿಶಾನೆ

ಮಲೇಬೆನ್ನೂರು, ಮೇ 6- ಇಲ್ಲಿನ ಪುರಸಭೆ ಮುಂಭಾಗದಲ್ಲಿ ಬಿಜೆಪಿ ಮುಖಂಡ ಹಾಗೂ ಪಂಚಮಸಾಲಿ ಪೀಠದ ಧರ್ಮದರ್ಶಿ ಚಂದ್ರಶೇಖರ್ ಪೂಜಾರ್‌ ಅವರು ತಮ್ಮ ಜನ್ಮ ದಿನದ ಅಂಗವಾಗಿ ಸಾರ್ವಜನಿಕರ ಸೇವೆಗಾಗಿ ನೀಡಿರುವ ತುರ್ತು ಸೇವಾ ವಾಹನಕ್ಕೆ ಪುರಸಭೆ ಅಧ್ಯಕ್ಷರಾದ ಶ್ರೀಮತಿ ಪಾನಿಪೂರಿ ರಂಗನಾಥ್ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.

ನಂತರ ಮಾತನಾಡಿದ ಚಂದ್ರಶೇಖರ್ ಪೂಜಾರ್, ಕೊರೊನಾ ಮಹಾಮಾರಿ 2ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಬಡ ಜನರಿಗೆ ಆಸ್ಪತ್ರೆಗೆ ತೆರಳಲು ತೊಂದರೆ ಆಗುತ್ತಿರುವು ದನ್ನು ಮನಗಂಡು ಈ ತುರ್ತು ಸೇವಾ ವಾಹನ ವನ್ನು ಉಚಿತವಾಗಿ ಸಾರ್ವಜನಿಕರಿಗೆ ನೀಡಿ ದ್ದೇನೆ. ಹರಿಹರ ತಾಲ್ಲೂಕಿನ ಜನರು ಸಹಾಯ ವಾಣಿ ನಂ- 7411655112 ಅಥವಾ 7411655113 ಗೆ ಫೋನ್ ಮಾಡಿದರೆ ಸಾಕು ವಾಹನ ನೀವು ನೀಡಿದ ವಿಳಾಸಕ್ಕೆ ಬರ ಲಿದೆ. ಇದಕ್ಕಾಗಿ ನೀವು ಒಂದು ರೂಪಾಯಿ ಕೂಡ ಹಣ ನೀಡಬೇಕಾಗಿಲ್ಲ ಎಂದು ತಿಳಿಸಿದರು.

ಇದಲ್ಲದೇ ಇನ್ನೂ ಅಗತ್ಯ ಸೇವೆಯ ಬಗ್ಗೆ ಯಾರಾದರೂ ಮಾಹಿತಿ ನೀಡಿದರೆ, ಅದಕ್ಕೆ ಸ್ಪಂದಿಸುತ್ತೇನೆಂದು ಚಂದ್ರಶೇಖರ್ ಪೂಜಾರ್ ಹೇಳಿದರು. 

ಪುರಸಭೆ ಸದಸ್ಯರಾದ ಬಿ. ಸುರೇಶ್, ಮಹಾಂತೇಶ್ ಸ್ವಾಮಿ, ಸುಬ್ಬಿ ರಾಜಪ್ಪ, ಮಾಸಣಗಿ ಶೇಖರಪ್ಪ, ನಾಮಿನಿ ಸದಸ್ಯರಾದ ಪಿ.ಆರ್. ರಾಜು, ಬಿ.ಹೆಚ್. ಮಂಜಪ್ಪ, ಎ.ಕೆ. ಲೋಕೇಶ್, ಆಶ್ರಯ ಸಮಿತಿ ಸದಸ್ಯ ಬಿ. ಚಂದ್ರಪ್ಪ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಬಿ. ಮಂಜುನಾಥ್, ಪಾನಿಪೂರಿ ರಂಗನಾಥ್, ಹರಿಹರ ನಗರಸಭೆ ಸದಸ್ಯ ರಜನಿಕಾಂತ್, ರಾಘವೇಂದ್ರ, ವಕೀಲ ಆನಂದ್, ಪ್ರವೀಣ್, ಗುತ್ತೂರ ಕರಿಬಸಪ್ಪ, ದೀಟೂರು ನಿರಂಜನ್, ಜಿ.ಪಿ. ಹನುಮಗೌಡ ಹಾಗೂ ಇನ್ನಿತರರಿದ್ದರು.

ಪೂಜೆ ಸಲ್ಲಿಸಿ ಪ್ರಾರಂಭ: ಇದಕ್ಕೂ ಮುನ್ನ ಚಂದ್ರಶೇಖರ್ ಪೂಜಾರ್ ಅವರು ಪಂಚಮ ಸಾಲಿ ಪೀಠದಲ್ಲಿರುವ ಹರ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ,  ಶ್ರೀ ವಚನಾನಂದ ಸ್ವಾಮೀಜಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಶ್ರೀಗಳು ಚಂದ್ರಶೇಖರ್ ಅವರನ್ನು ಸನ್ಮಾನಿಸಿ, ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

error: Content is protected !!