ಬಿಜೆಪಿ ರಾಜಕೀಯ ಕಿತ್ತಾಟಕ್ಕೆ ಜನರಿಂದಲೇ ತಕ್ಕ ಪಾಠ

ಬಿಜೆಪಿ ರಾಜಕೀಯ ಕಿತ್ತಾಟಕ್ಕೆ ಜನರಿಂದಲೇ ತಕ್ಕ ಪಾಠ - Janathavaniದಾವಣಗೆರೆ, ಜು.23- ರಾಜ್ಯದ ಬಿಜೆಪಿಯಲ್ಲಿ ಬಹಳಷ್ಟು ರಾಜಕೀಯ ಕಿತ್ತಾಟ ನಡೆಯುತ್ತಿದೆ. ರಾಜ್ಯದ ಸಂಕಷ್ಟದ ಪರಿಸ್ಥಿತಿಯಲ್ಲಿ ಕೆಟ್ಟದಾಗಿ ಆಡಳಿತ ನಡೆಸುತ್ತಿರುವುದು ಸರಿಯಲ್ಲ, ಜನರು ಇದನ್ನು ಸಹಿಸುವುದಿಲ್ಲ, ಇದಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದು ಮಾಜಿ ಸಚಿವರೂ ಆದ ಹಿರಿಯ ಕಾಂಗ್ರೆಸ್ ಶಾಸಕ ಹೆಚ್.ಕೆ. ಪಾಟೀಲ್ ಹೇಳಿದರು. 

ಕಾರ್ಯಕ್ರಮವೊಂದರಲ್ಲಿ ಭಾಗವಹಿಸ ಲೆಂದು ಇಂದು ನಗರಕ್ಕಾಗಮಿಸಿದ್ದ ಅವರು, ತಮ್ಮ ನ್ನು ಭೇಟಿಯಾದ ಪತ್ರಕರ್ತರೊಂದಿಗೆ ಮಾತ ನಾಡುತ್ತಾ ಕೊರೊನಾದಿಂದ ಇನ್ನೂ ಜಾಗೃತರಾಗಿಲ್ಲ. ಆರ್ಥಿಕ ವಲಯ ಸಂಕಷ್ಟ ದಲ್ಲಿದೆ. ಇಂತಹ ಸವಾಲು ಇರುವ ಪರಿ ಸ್ಥಿತಿಯಲ್ಲಿ ರಾಜಕೀಯ ಬದಲಾವಣೆ, ವ್ಯತ್ಯಾಸ, ದ್ವಂದ್ವಗಳನ್ನು ಜನರು ಕೆಟ್ಟ ರೀತಿಯಲ್ಲಿ ನೋಡುತ್ತಿದ್ದಾರೆ. ಮುಂದೆ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು. 

ಬಿ.ಎಸ್.ಯಡಿಯೂರಪ್ಪ ಅವರಿಗೆ ಆ ಪಕ್ಷದ ಹೈಕಮಾಂಡ್ ಆಶೀರ್ವದಿಸುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಯಡಿಯೂರಪ್ಪ ವಿರುದ್ಧ ಹಲವರು ಪ್ರಯತ್ನಿಸುತ್ತಿದ್ದಾರೆ. ಇದೇ ದಿನಾಂಕ 26 ರಂದು ಬಿಎಸ್‌ವೈ ರಾಜೀನಾಮೆ ಸಲ್ಲಿಸುತ್ತಾರೆ ಅನ್ನುವ ಮಾತುಗಳು ಕೇಳಿಬರುತ್ತಿವೆ. ಅದೇನೆ ಇರಲಿ ಅದು ಅವರ ಪಕ್ಷದ ವಿಚಾರ. ಎಲ್ಲಿಯವರೆಗೆ ಸರ್ಕಾರ ಇರುತ್ತೋ ಅಲ್ಲಿಯವರೆಗೆ ಕೆಲಸ ಮಾಡಬೇಕು. ಸರ್ಕಾರ ಇರುವವರೆಗೂ ಜೀವಂತ ವಾಗಿ ಇರಬೇಕು. ಇದು ನನ್ನ ಅಪೇಕ್ಷೆಯಾಗಿದೆ ಎಂದರು.  ಕೆಲವು ಮಂತ್ರಿಗಳು ಕೋಟಿಗಟ್ಟಲೇ ಲಂಚದ ವ್ಯವಹಾರ ಮಾಡಿದ್ದಾರೆ ಎಂದು ಕೇಳಿ ಬರುತ್ತಿದೆ. ಈ ಪುರಾವೆಗಳನ್ನು ವಿರೋಧ ಪಕ್ಷಗಳು ಕೊಟ್ಟಿಲ್ಲ. ಬೇರೆ ಯಾರು ಹೇಳಿಲ್ಲ.  ಮಾಧ್ಯಮಗಳೇ ಅವುಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾರೆ. ಇಂತಹ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣ ಆಗಬಾರದಿತ್ತು, ಇದು ಜನರ ದುರ್ದೈವ ಎಂದರು.

error: Content is protected !!