ಬೀದಿ ಬದಿ ವಾಪಾರಸ್ಥರು ಸುಂಕ ನೀಡದಂತೆ ಪಾಲಿಕೆ ಸೂಚನೆ

ದಾವಣಗೆರೆ, ಜು.22 – ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ವಿವಿಧ ಸ್ಥಳಗಳಲ್ಲಿ ನಿತ್ಯ ಹಾಗೂ ವಾರದ ಸಂತೆಗಳಲ್ಲಿ ಬೀದಿ ಬದಿ ವ್ಯಾಪಾರಸ್ಥರಿಂದ ಸುಂಕ ವಸೂಲಾತಿ ಮಾಡಲು ನೀಡಿದ ಕಾರ್ಯಾದೇಶದ ಅವಧಿ ಮುಕ್ತಾಯವಾಗಿದ್ದು, ಮುಂದಿನ ಹರಾಜು ಪ್ರಕ್ರಿಯೆ ನಡೆಸಿ, ಕಾರ್ಯಾದೇಶ ನೀಡುವವರೆಗೂ ಬೀದಿ ಬದಿ ವ್ಯಾಪಾರಿಗಳು ಸುಂಕ ನೀಡದಂತೆ ಸೂಚನೆ ನೀಡಲಾಗಿದೆ.

ಸುಂಕ ವಸೂಲಾತಿ ಹಕ್ಕಿನ ಬಹಿರಂಗ ಹರಾಜು ಪ್ರಕ್ರಿಯೆ ಕೋವಿಡ್-19 ಮತ್ತು ಇತರೆ ಕಾರಣಗಳಿಂದ ಕೈಗೊಂಡಿರುವುದಿಲ್ಲ.  ಹೀಗಾಗಿ ಮಹಾನಗರ ಪಾಲಿಕೆಯಿಂದ ಹರಾಜು ಪ್ರಕ್ರಿಯೆ ನಡೆಸಿ ಕಾರ್ಯಾದೇಶ ನೀಡುವವರೆಗೂ ಸುಂಕವನ್ನು ನೀಡದಂತೆ ಸೂಚನೆ ನೀಡಲಾಗಿದೆ.   ಯಾರಾದರೂ ಸುಂಕ ವಸೂಲಾತಿ ಮಾಡುತ್ತಿರುವುದು ಕಂಡು ಬಂದಲ್ಲಿ ಮಹಾನಗರಪಾಲಿಕೆ ಕಚೇರಿಗೆ ದೂರು ಸಲ್ಲಿಸಬಹುದು ಎಂದು ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ತಿಳಿಸಿದ್ದಾರೆ.

error: Content is protected !!