ಹರಪನಹಳ್ಳಿ : ರೈತ ವಿರೋಧಿ ಕಾಯ್ದೆ ಖಂಡಿಸಿ ಪ್ರತಿಭಟನೆ

ಹರಪನಹಳ್ಳಿ, ಮಾ.5- ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು  ರದ್ದುಪಡಿಸಬೇಕು. ರೈತರ  ಹಿತಾಸಕ್ತಿಗಳನ್ನು ಕಾಪಾಡಬೇಕೆಂದು  ಒತ್ತಾಯಿಸಿ  ತಾಲ್ಲೂಕು ಬ್ಲಾಕ್ ಕಾಂಗ್ರೆಸ್, ಯುವ ಕಾಂಗ್ರೆಸ್ ಸೇರಿದಂತೆ ವಿವಿಧ ಪ್ರಗತಿ ಪರ ಸಂಘಟನೆಗಳ ನೇತೃತ್ವದಲ್ಲಿ  ತಾಲ್ಲೂಕಿನ ದೇವರ ತಿಮ್ಮಲಾಪುರದ  ವೆಂಕಟೇಶ್ವರ ದೇವ ಸ್ಥಾನದಿಂದ ಬೃಹತ್ ಟ್ರ್ಯಾಕ್ಟರ್ ಬಂಡಿಗಳ ರಾಲಿ ಮತ್ತು ಪಾದಯಾತ್ರೆ ಮೂಲಕ  ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ತೆರಳಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಶಾಸಕ ಪಿ.ಟಿ. ಪರಮೇಶ್ವರ್ ನಾಯ್ಕ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಖಾಸಗೀಕರಣ ಮಾಡಿ ದೇಶದ ಹಾಗೂ ರಾಜ್ಯದ ಜನರನ್ನು ಲೂಟಿ  ಮಾಡುತ್ತಿವೆ ಎಂದು ಆರೋಪಿಸಿದರು.

ಜಿಲ್ಲಾ ಕಾಂಗ್ರೆಸ್‍ ಅಧ್ಯಕ್ಷ ಶಿವಯೋಗಿ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಿನಪ್ಪ, ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸದಸ್ಯ ಶಶಿಧರ್ ಪೂಜಾರ್, ರಾಜ್ಯ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ನಿರ್ದೇಶಕ ಬಿ. ನಜೀರ್ ಅಹಮದ್,  ಪುರಸಭೆ ಮಾಜಿ ಅಧ್ಯಕ್ಷ ಹೆಚ್.ಕೆ. ಹಾಲೇಶ್,  ನೀಲ ಗುಂದ ಜಿಲ್ಲಾ ಪಂಚಾಯತಿ ಸದಸ್ಯ ಹೆಚ್.ಬಿ.ಪರಶುರಾಮಪ್ಪ. ಚಿಗಟೇರಿ ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಸದಸ್ಯ ಡಾ. ಮಂಜುನಾಥ ಉತ್ತಂಗಿ,  ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮುತ್ತಿಗಿ ಜಂಬಣ್ಣ, ಟಿ.ಎ.ಪಿ.ಎ.ಎಂ.ಎಸ್ ಅಧ್ಯಕ್ಷ ಪಿ. ಪ್ರೇಮ್ ಕುಮಾರ್, ಪಿಎಲ್‌ಡಿ ಬ್ಯಾಂಕ್  ಮಾಜಿ ಅಧ್ಯಕ್ಷ ಪಿ.ಎಲ್. ಪೋಮ್ಯಾನಾಯ್ಕ, ನಿರ್ದೇಶಕರುಗ ಳಾದ ತಿಮ್ಮಾನಾಯ್ಕ್, ತಾವರನಾಯ್ಕ, ಕೊಟ್ರೇಶ್, ತಾ.ಪಂ. ಮಾಜಿ ಅಧ್ಯಕ್ಷ ಕೆ. ಹನು ಮಂತಪ್ಪ, ಜಿ.ಪಂ. ಮಾಜಿ ಸದಸ್ಯ ಎಂ.ಟಿ. ಬಸವನಗೌಡ, ನ್ಯಾಯವಾದಿಗಳಾದ ಪ್ರಕಾಶ ಪಟೇಲ್, ಮತ್ತಿಹಳ್ಳಿ ಅಜ್ಜಣ್ಣ, ನಂದೀಶನಾಯ್ಕ, ಪುರಸಭೆ ಸದಸ್ಯ ರಾದ ಜಾಕೀರ್ ಸರ್ಖಾವಸ್, ಭರತೇಶ್, ಎಪಿ ಎಂಸಿ ಮಾಜಿ ಅಧ್ಯಕ್ಷ ಚಿಗಟೇರಿ ಜಂಬಣ್ಣ,  ನಿರ್ದೇಶಕ ಚಂದ್ರಶೇಖರಪ್ಪ. ಮುಖಂಡರುಗ ಳಾದ ಪಿ.ಟಿ. ಭರತ್, ವಾರದ ಗೌಸ್, ಯಡಿಹಳ್ಳಿ ಶೇಖರಪ್ಪ, ಜಗದೀಶ್‌, ಪೂಜಾರ್ ಮಂಜುನಾಥ,  ಎಸ್.ಕೆ.ಖಾಲಿದ್, ಎನ್. ಮಜೀದ್, ಅಲಮರಸಿಕೇರಿ ಪರಶುರಾಮ, ರೆಡ್ಡಿಗೌಡ್ರು, ಅಟವಾಳಿಗಿ ಕೊಟ್ರೇಶ್, ಗಿಡ್ಡಳ್ಳಿ ನಾಗರಾಜ,  ಮಹಂತೇಶ್ ನಾಯ್ಕ್, ಎಸ್.ರಿಯಾಜ್ ಇನ್ನಿತರರಿದ್ದರು.

error: Content is protected !!