ದಾವಣಗೆರೆ, ಮಾ.5- ರಾಜ್ಯದಲ್ಲಿ ಅಂಗವಿಕಲರಿಗೆ ಸಿಗಬೇಕಾದ ಸವಲತ್ತುಗಳು ಮರೀಚಿಕೆಯಾಗಿವೆ, ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಕರ್ನಾಟಕ ಸಮರ ಸೇನೆ ಅಂಗವಿಕಲರ ಘಟಕದ ರಾಜ್ಯಾಧ್ಯಕ್ಷ ಪರಶುರಾಮ್ ಸುದ್ದಿಗೋಷ್ಠಿಯಲ್ಲಿ ದೂರಿದರು.
ಈ ಬಾರಿಯ ಬಜೆಟ್‌ನಲ್ಲಿ ಅಂಗವಿಕಲರಿಗೆ ಉದ್ಯೋಗ ನೀಡುವ, ಸ್ವಯಂ ಉದ್ಯೋಗಕ್ಕಾಗಿ ಆರ್ಥಿಕ ನೆರವು, ಪಿಂಚಣಿ ಸೇರಿದಂತೆ ವಿವಿಧ ಬಗೆಯ ಸೌಲಭ್ಯಗಳನ್ನು ನೀಡುವ ಬಗ್ಗೆ ಪ್ರಸ್ತಾಪ ಮಾಡಬೇಕು ಎಂದರು.
ಶೇ. 5 ಅನುದಾನ ಗ್ರಾ.ಪಂ, ತಾ.ಪಂ, ಪ.ಪಂ, ನಗರಸಭೆ, ಪುರಸಭೆಗಳಲ್ಲಿ ಸದ್ಬಳಕೆಯಾಗುತ್ತಿಲ್ಲ ಎಂದು ಹೇಳಿದರು. ಅಂಗವಿಕಲರಿಗೆ ನಿವೇಶನ, ಆರ್ಥಿಕ ಸಹಾಯ ಧನ ಸೇರಿದಂತೆ, ಇತರೆ ಮೂಲಸೌಕರ್ಯಗಳನ್ನು ಕೊಡಿಸಲು ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಆಯ್ಕೆ : ಕರ್ನಾಟಕ ಸಮರ ಸೇನೆ ರಾಜ್ಯ ವಿಕಲಚೇತನರ ಸಮಿತಿಗೆ ಡಿ. ಪರಶುರಾಮ್ ಹಾಗೂ ಮಹಿಳಾ ವಿಭಾಗಕ್ಕೆ ಶಶಿರೇಖಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಕಾರ್ಯಾಧ್ಯಕ್ಷ ಡಾ. ಬಿ. ವಾಸುದೇವ್ ತಿಳಿಸಿದರು.
ಮೇ ತಿಂಗಳಲ್ಲಿ ಸಾಮೂಹಿಕ ವಿವಾಹ ಮಾಡುವ ಉದ್ದೇಶವಿದ್ದು, ನಟ ಶಿವರಾಜ್‌ಕುಮಾರ್ ಅವರನ್ನು ಆಹ್ವಾನಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿ.ಪಿ. ಪ್ರಕಾಶ್, ಎಸ್. ಅಬ್ದುಲ್ ಮಜೀದ್, ಶೇಖರ್ ಉಪಸ್ಥಿತರಿದ್ದರು.