ಹಾವೇರಿ ಜಿಲ್ಲೆ ಮೀಸಲಾತಿ ಪ್ರಕಟ

ರಾಣೇಬೆನ್ನೂರು, ಮೇ 1- ರಾಜ್ಯ ಚುನಾವಣಾ ಆಯೋಗವು ಕರ್ನಾಟಕ ಗ್ರಾಮ ಸ್ವರಾಜ್‌ ಹಾಗೂ ಪಂಚಾಯತ್ ರಾಜ್ ಅಧಿನಿಯಮದ ಅನುಸಾರ ಹಾವೇರಿ ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯ್ತಿ ಸ್ಥಾನಗಳ ಮೀಸಲಾತಿ ಪ್ರಕಟಿಸಿದೆ.

ಜಿಲ್ಲೆಯ 8 ತಾಲ್ಲೂಕುಗಳ ಒಟ್ಟು 38 ಸ್ಥಾನಗಳಲ್ಲಿ 6 ಪರಿಶಿಷ್ಟ ಜಾತಿ, 4 ಪರಿಶಿಷ್ಟ ಪಂಗಡ, 7 ಹಿಂದುಳಿದ ಅ ವರ್ಗ, 2 ಹಿಂದುಳಿದ ಬ ವರ್ಗ, 19 ಸಾಮಾನ್ಯ, 19 ಸ್ಥಾನಗಳು ಶೇ. 50  ಮಹಿಳೆಯರಿಗೆ ಮೀಸಲಿರಿಸಲಾಗಿದೆ.

ಜಿಲ್ಲೆಯ 8 ತಾ.ಪಂ. ಗಳ ಒಟ್ಟು104 ಸ್ಥಾನಗಳಲ್ಲಿ ಪರಿಶಿಷ್ಟ ಜಾತಿ 16, ಪರಿಶಿಷ್ಟ ಪಂಗಡ 11,  ಹಿಂದುಳಿದ ಅ ವರ್ಗ18,  ಹಿಂದುಳಿದ ಬ ವರ್ಗ 4, ಸಾಮಾನ್ಯ 55, ಶೇ. 50 ಮಹಿಳೆಯರಿಗೆ ಮೀಸಲಿರಿಸಲಾಗಿದೆ. ರಾಣೇಬೆನ್ನೂರು  ತಾಲ್ಲೂಕಿನ ಒಟ್ಟು 19 ಸ್ಥಾನಗಳಲ್ಲಿ  3 ಪರಿಶಿಷ್ಟ ಜಾತಿ, 2 ಪರಿಶಿಷ್ಟ ಪಂಗಡ, 3 ಹಿಂದುಳಿದ ಅ ವರ್ಗ, 1 ಹಿಂದುಳಿದ ಬ ವರ್ಗ, 10 ಸಾಮಾನ್ಯ, ಮಹಿಳೆಯರಿಗೆ 10  ಸ್ಥಾನಗಳನ್ನು ಮೀಸಲಿರಿಸಲಾಗಿದೆ.

error: Content is protected !!