ಜಗಳೂರು, ಮಾ.4- ಸವಿತಾ ಸಮಾಜ ಸಂಘಟನೆ ಕೆಲವರಿಗೆ ಮಾತ್ರ ಸೀಮಿತವಾಗಿದ್ದು, ಸಮುದಾಯ ಸೌಲಭ್ಯಗಳಿಂದ ವಂಚಿತವಾಗಿದೆ ಎಂದು ಸವಿತಾ ಸಮಾಜದ ಮುಖಂಡ ಮೋಹನ್ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಪತ್ರಿಕಾಭವನದಲ್ಲಿ ಸವಿತಾ ಸಮಾಜದಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸವಿತಾ ಸಮಾಜದ ಹಿರಿಯರಿಗೆ ಗೌರ ವಿಸದೇ ಕೆಲವೇ ವ್ಯಕ್ತಿಗಳು ಮಾತ್ರ ಬಿಂಬಿಸಿ ಕೊಳ್ಳುತ್ತಿದ್ದು ಸವಿತಾ ಮಹರ್ಷಿ ಜಯಂತಿ ಯಲ್ಲಿ ಬೆರಳಣಿಕೆಯಷ್ಟು ಜನರು ಮಾತ್ರ ಭಾಗವಹಿಸಿದ್ದು ಇದಕ್ಕೆ ಸಾಕ್ಷಿ ಎಂದರು.
ಅಲ್ಲದೆ ಸಮಾಜದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದ ಕಾರಣ ಭವನ ನಿರ್ಮಾಣಕ್ಕೆ ನಿವೇಶನ ನೀಡುವ ಶಾಸಕರ ಭರವಸೆ ನೆನೆಗುದಿಗೆ ಬಿದ್ದಿದೆ. ಅಲ್ಲದೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸಿಗುತ್ತಿಲ್ಲ.ಕೋವಿಡ್ ಸಮಯದಲ್ಲಿ ಸರ್ಕಾರದ ಐದು ಸಾವಿರ ಪ್ರೋತ್ಸಾಹ ಧನ ಕೆಲವರಿಗೆ ಮಾತ್ರ ಜಮಾ ಆಗಿದ್ದು ಗ್ರಾಮೀಣ ಭಾಗದಲ್ಲಿ ಯಾರೊಬ್ಬರಿಗೂ ತಲುಪಿಲ್ಲ. ನಮಗೆ ಸಮಾಜದ ಸಂಘಟಕರ ಬಗ್ಗೆ ವಿರೋಧವಿಲ್ಲ. ಎಲ್ಲರಿಗೂ ನ್ಯಾಯ ಸಿಗಬೇಕಿದೆ ಕಡೆಗಣನೆ ಸಲ್ಲದು ಎಂದರು. ಈ ಸಂದರ್ಭದಲ್ಲಿ ಗುರುಮೂರ್ತಿ ಸೇರಿದಂತೆ ಇನ್ನಿತರರಿದ್ದರು.