ಹರಪನಹಳ್ಳಿ, ಜು.21- ಕೊರೊನಾ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕಳೆದ ವರ್ಷದ ಹಾಗೆ ಈ ವರ್ಷವೂ ಸಹ ಮುಸ್ಲಿಂ ಬಾಂಧವರು ತ್ಯಾಗ, ಬಲಿದಾನಗಳ ಸಂಕೇತವಾದ ಪವಿತ್ರ ಬಕ್ರೀದ್ ಹಬ್ಬವನ್ನು ಮನೆ ಮತ್ತು ಮಸೀದಿಗಳಲ್ಲಿ ಸರಳವಾಗಿ ಆಚರಿಸಿದರು.
ಈ ವೇಳೆ ನಿವೃತ್ತ ಮುಖ್ಯ ಶಿಕ್ಷಕ ಜೆ.ಎಂ. ಸರ್ಖಾವಾಸ್ ಹಾಗೂ ಪುರಸಭೆ ಸದಸ್ಯ ಜಾಕೀರ್ ಹುಸೇನ್, ಖಾಜಿ ಮುಸ್ತಾಕ್ ಅಮ್ಜದ್ ರಜ್ಜಿ ತಂಜೀಮ್ ಉಲೇಮಾ-ಹಿ-ಅಲ್ಲೇ ಸುನತ್ ಹರಪನಹಳ್ಳಿ, ಅಲ್ಪಸಂಖ್ಯಾತರ ಘಟಕದ ತಾಲ್ಲೂಕು ಅಧ್ಯಕ್ಷ ಎ. ಮೂಸಾ ಸಾಬ್ ಮಾತನಾಡಿದರು.