ದಾವಣಗೆರೆ, ಮೇ 2 – ಜಿಲ್ಲೆ ಯಲ್ಲಿ ಭಾನುವಾರ 317 ಕೊರೊನಾ ಸೋಂಕಿತರು ಕಂಡು ಬಂದಿದ್ದು, ಇದೇ ದಿನ ಇಬ್ಬರು ಸಾವನ್ನಪ್ಪಿದ್ದಾರೆ.
264 ಸೋಂಕಿತರು ಇದೇ ದಿನ ಗುಣ ಹೊಂದಿ ಬಿಡುಗಡೆಯಾಗಿ ದ್ದಾರೆ. ಜಿಲ್ಲೆಯಲ್ಲಿ ಸಕ್ರಿಯ ಸೋಂಕಿ ತರ ಸಂಖ್ಯೆ 2,148ಕ್ಕೆ ತಲುಪಿದೆ.
ಭಾನುವಾರ ದಾವಣಗೆರೆಯಲ್ಲಿ ಅತಿ ಹೆಚ್ಚಿನ 209 ಸೋಂಕಿತರು ಪತ್ತೆಯಾಗಿದ್ದಾರೆ. ಹರಿಹರದಲ್ಲಿ 39, ಜಗಳೂರಿನಲ್ಲಿ 17, ಚನ್ನಗಿರಿಯಲ್ಲಿ 16, ಹೊನ್ನಾಳಿಯಲ್ಲಿ 19 ಹಾಗೂ ಇತರೆ ಜಿಲ್ಲೆಯ 17 ಸೋಂಕಿತರು ಕಂಡು ಬಂದಿದ್ದಾರೆ.
ಮಾಯಕೊಂಡದ 60 ವರ್ಷದ ವ್ಯಕ್ತಿ ಹಾಗೂ ಕೈದಾಳೆಯ 33 ವರ್ಷದ ವ್ಯಕ್ತಿ ಮೃತರಲ್ಲಿ ಸೇರಿದ್ದಾರೆ.