23 ವಾರ್ಡ್‍ಗಳಿಗೆ ಮೀಸಲಾತಿ ನಿಗದಿ

ಮಲೇಬೆನ್ನೂರು ಪುರಸಭೆ

ಮಲೇಬೆನ್ನೂರು, ಏ.30 – ಇಲ್ಲಿನ ಪುರಸಭೆಯ ಈಗಿರುವ ಸದಸ್ಯರ ಅವಧಿ ಮೇ 24ಕ್ಕೆ  ಮುಕ್ತಾಯಗೊಳ್ಳಲಿದ್ದು. ಹೊಸ ಸದಸ್ಯರ ಆಯ್ಕೆಗೆ ಚುನಾವಣೆ ನಡೆಸಬೇಕಾಗಿರುವುದರಿಂದ 2011 ರ ಜನಗಣತಿಯನ್ನಾಧರಿಸಿ ಪುರಸಭೆಯ 23 ವಾರ್ಡ್‍ಗಳಿಗೆ ಕರಡು ಮೀಸಲಾತಿಯನ್ನು ನಿಗದಿ ಮಾಡಿ ಸರ್ಕಾರದ ಅಧಿಸೂಚನೆಯಂತೆ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಪ್ರಕಟಿಸಿದ್ದಾರೆ.

ಕರಡು ಮೀಸಲಾತಿಯನ್ನು ಸಾರ್ವಜನಿಕರ ಅವ ಗಾಹನೆಗಾಗಿ ಪ್ರಕಟಸಲಾಗಿದ್ದು, ಈ ಅಧಿಸೂಚನೆಯನ್ನು ಸರ್ಕಾರಿ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಅಂದರೆ ದಿನಾಂಕ 27.04.2021 ರಿಂದ 7 ದಿನಗಳ ತರುವಾಯ ಈ ಅಧಿಸೂಚನೆಯನ್ನು ಪರಿಗಣನೆಗೆ ತೆಗದುಕೊಳ್ಳಲಾಗುವುದು. 

ಈ ವಿಷಯಕ್ಕೆ ಸಂಬಂಧಿ ಸಿದಂತೆ ಯಾವುದೇ ಆಕ್ಷೇಪಣೆಗಳನ್ನು ಸಲ್ಲಿಸಲು ಇಚ್ಚಿಸುವ ವ್ಯಕ್ತಿಗಳು ಅದನ್ನು ಲಿಖಿತ ರೂಪದಲ್ಲಿ ಕಾರಣ ಸಹಿತವಾಗಿ ದಾಖಲೆಗಳೊಂದಿಗೆ ನಿಗದಿತ ದಿನಾಂಕದ ಒಳಗಾಗಿ ಜಿಲ್ಲಾಧಿಕಾರಿಗಳು ದಾವಣಗೆರೆ ಇಲ್ಲಿ ಸಲ್ಲಿಸು ವಂತೆ ಎಡಿಸಿ ಪೂಜಾರ ವೀರಮಲ್ಲಪ್ಪ ತಿಳಿಸಿದ್ದಾರೆ.

ಮೀಸಲಾತಿ ವಿವರ : 1ನೇ ವಾರ್ಡ್‍- ಸಾಮಾನ್ಯ, 2ನೇ ವಾರ್ಡ್‍ – ಬಿಸಿಎಂ-`ಎ’ 3ನೇ ವಾರ್ಡ್‍ – ಸಾಮಾನ್ಯ, 4ನೇ ವಾರ್ಡ್‍- ಬಿಸಿಎಂ-`ಬಿ’ (ಮಹಿಳೆ), 5ನೇ ವಾರ್ಡ್‍ – ಸಾಮಾನ್ಯ (ಮಹಿಳೆ), 6ನೇ ವಾರ್ಡ್‍-ಬಿಸಿಎಂ -`ಎ’ 7ನೇ ವಾರ್ಡ್‍ ಬಿಸಿಎಂ-`ಎ’, 8ನೇ ವಾರ್ಡ್‍ ಬಿಸಿಎಂ – ಎ (ಮಹಿಳೆ) 9 ನೇ ವಾರ್ಡ್‌ ಬಿಸಿಎಂ – ಎ (ಮಹಿಳೆ), 10ನೇ ವಾರ್ಡ್‍ – ಎಸ್ಸಿ (ಮಹಿಳೆ), 11 ನೇ ವಾರ್ಡ್‍ ಸಾಮಾನ್ಯ (ಮಹಿಳೆ), 12ನೇ ವಾರ್ಡ್‍- ಸಾಮಾನ್ಯ (ಮಹಿಳೆ) 13ನೇ ವಾರ್ಡ್‍ ಬಿಸಿಎಂ – ಎ (ಮಹಿಳೆ), 14 ನೇ ವಾರ್ಡ್‍ ಸಾಮಾನ್ಯ (ಮಹಿಳೆ), 15ನೇ ವಾರ್ಡ್‍ ಬಿಸಿಎಂ – ಎ (ಮಹಿಳೆ), 16ನೇ ವಾರ್ಡ್‍ ಸಾಮಾನ್ಯ, 17ನೇ ವಾರ್ಡ್‍ ಸಾಮಾನ್ಯ (ಮಹಿಳೆ), 18ನೇ ವಾರ್ಡ್‍ – ಬಿಸಿಎಂ – `ಎ’ , 19ನೇ ವಾರ್ಡ್‍-ಸಾಮಾನ್ಯ (ಮಹಿಳೆ), 20ನೇ ವಾರ್ಡ್‍- ಸಾಮಾನ್ಯ, 21 ನೇ ವಾರ್ಡ್‍ ಸಾಮಾನ್ಯ (ಮಹಿಳೆ), 22ನೇ ವಾರ್ಡ್‍-ಸಾಮಾನ್ಯ, 23ನೇ ವಾರ್ಡ್‍ ಆಶ್ರಯ ಕಾಲೋನಿ- ಎಸ್ಟಿ.

ಆಕ್ಷೇಪ: ಈಗ ಬಿಡುಗಡೆ ಮಾಡಿರುವ ಕರಡು ಮೀಸಲಾತಿ ಸಂಪೂರ್ಣವಾಗಿ ವಾರ್ಡ್‍ನಲ್ಲಿರುವ ವಾಸ್ತವ ಸ್ಥಿತಿ ಅರಿತು ಮೀಸಲಾತಿ ಪ್ರಕಟಿಸಬೇಕೆಂದು ಬ್ಲಾಕ್ ಕಾಂಗ್ರೆಸ್‍ ಅಧ್ಯಕ್ಷ ಎಂ.ಬಿ. ಅಬೀದ್‍ ಒತ್ತಾಯಿ ಸಿದ್ದಾರೆ. ಅಲ್ಲದೇ  ಈ ಕುರಿತು ಜಿಲ್ಲಾಧಿಕಾರಿಗಳಿಗೆ ಪತ್ರ ಮುಖೇನ ಆಕ್ಷೇಪಣೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

error: Content is protected !!