ಮಲೇಬೆನ್ನೂರಿನಲ್ಲಿ ಲಸಿಕೆಗೆ ಪರದಾಟ

ಮಲೇಬೆನ್ನೂರು, ಏ.29 – ಪಟ್ಟಣದ ಭೋವಿ ಕಾಲೋನಿಯಲ್ಲಿ ಬುಧವಾರ 36 ವರ್ಷದ ವ್ಯಕ್ತಿಯೊ ಬ್ಬರಿಗೆ ಕೊರೊನಾ ಪಾಸಿಟಿವ್‌ ಬಂದಿರುವ ಹಿನ್ನೆಲೆಯಲ್ಲಿ ಗುರುವಾರ ಆ ವ್ಯಕ್ತಿಯ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರನ್ನು ಟೆಸ್ಟ್‍ಗೆ ಒಳಪಡಿಸಲಾಯಿತು.

ಈ ಸಂದರ್ಭದಲ್ಲಿ ಹಾಜರಿದ್ದ ಉಪ ತಹಶೀಲ್ದಾರ್‍ ಆರ್‌.ರವಿ, ಪುರಸಭೆ ಮುಖ್ಯಾಧಿಕಾರಿ ದಿನಕರ್‌, ಗ್ರಾ.ಪಂ ಮಾಜಿ ಅಧ್ಯಕ್ಷ  ಭೋವಿ ಕುಮಾರ್‍, ಪುರಸಭೆ ಅಧಿಕಾರಿಗಳಾದ ಉಮೇಶ್, ಪ್ರಭು ಮತ್ತಿತರರಿದ್ದರು.

ಲಸಿಕೆಗೆ ಪರದಾಟ : ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬುಧವಾರ ಮತ್ತು ಗುರುವಾರ ಕೋವಿಡ್ ಲಸಿಕೆ ಪೂರೈಕೆ ಇಲ್ಲದ ಕಾರಣ ಲಸಿಕೆ ಪಡೆದುಕೊಳ್ಳಲು ಬಂದಿದ್ದ ಜನರು ಪರದಾಡುವಂತಾಯಿತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವೈದ್ಯಾಧಿಕಾರಿ ಡಾ. ಲಕ್ಷ್ಮಿದೇವಿ ಅವರು ಶುಕ್ರವಾರ ಲಸಿಕೆ ಬರುವ ಸಾಧ್ಯತೆ ಇದ್ದು, ಬುಧವಾರ ಮತ್ತು ಗುರುವಾರ ಹೆಸರು ನೋಂದಾಯಿಸಿ ದವರಿಗೆ ಲಸಿಕೆ ನೀಡಲಾಗುವುದು ಎಂದರು.

error: Content is protected !!