ಕೋವಿಡ್ ಕೇರ್ ಸೆಂಟರ್‍ಗೆ ನೋಡಲ್ ಅಧಿಕಾರಿ ಭೇಟಿ

ಹರಿಹರ, ಏ.29- ನಗರದ ಹೊರವಲಯದಲ್ಲಿರುವ ಕೋವಿಡ್ ಕೇರ್ ಸೆಂಟರ್ ನಲ್ಲಿ ಕೊರೊನಾ ರೋಗಿಗಳ ಚಿಕಿತ್ಸೆಗೆ ಯಾವುದೇ ತೊಂದರೆ ಬರದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುವುದಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಕೊರೊನಾ ನೋಡಲ್ ಅಧಿಕಾರಿ ಕೌಸರ್ ರೇಷ್ಮಾ ತಿಳಿಸಿದ್ದಾರೆ.

ಅವರು ಗುತ್ತೂರು ಬಳಿ ಇರುವ ಕೋವಿಡ್ ಕೇರ್ ಸೆಂಟರ್‌ಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಬಗ್ಗೆ ತಹಶೀಲ್ದಾರ್‌ ಕೆ. ಬಿ. ರಾಮಚಂದ್ರಪ್ಪನವರ ಬಳಿ ಮಾಹಿತಿ ಪಡೆದು, ನಂತರದಲ್ಲಿ ಪತ್ರಕರ್ತರ ಜೊತೆ ಮಾತನಾಡಿದರು.

ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಮಾತನಾಡಿ, ನಗರದ ಹೊರವಲಯದ ಗುತ್ತೂರು ಬಳಿ ಇರುವ ಕೋವಿಡ್ ಕೇರ್ ಸೆಂಟರನ್ನು ಇಂದಿನಿಂದ ಕಾರ್ಯರೂಪಕ್ಕೆ ತರಲಾಗುತ್ತಿದೆ. ಇಲ್ಲಿ ಕೊರೊನಾ ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆ, ಬೆಳಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟ, ಶುದ್ಧ ನೀರು ಸೇರಿದಂತೆ ರೋಗಿಗಳಿಗೆ ಬೇಕಾಗುವ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. 

ಈ ಸಂದರ್ಭದಲ್ಲಿ ಪೌರಾಯುಕ್ತರಾದ ಎಸ್.ಲಕ್ಷ್ಮಿ, ಎಇಇ ಬಿರಾದಾರ್‌, ಆರೋಗ್ಯ ಅಧಿಕಾರಿ ಡಾ. ಚಂದ್ರಮೋಹನ್, ಡಾ. ವಿಶ್ವನಾಥ, ಸಿಡಿಪಿಓ ನಿರ್ಮಲ, ಪ್ರಿಯದರ್ಶಿನಿ ಹಾಗೂ ಇತರರು ಹಾಜರಿದ್ದರು.

error: Content is protected !!