ದಾವಣಗೆರೆ, ಏ.29- ಎರಡನೇ ಅಲೆಯ ಕೊರೊನಾ ವೈರಸ್ ಸಾಕಷ್ಟು ಅವಾಂತರ ಸೃಷ್ಟಿಸುತ್ತಿದೆ. ಆದ್ದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೊ. ಲಿಂಗಣ್ಣ ತಿಳಿಸಿದರು.
ರೂಪಾಂತರಿ ವೈರಸ್ ಎಲ್ಲೆಡೆ ವೇಗವಾಗಿ ಹರಡು ತ್ತಿದೆ. ನನ್ನ ಕ್ಷೇತ್ರದಲ್ಲಿ ಕೋವಿಡ್ನಿಂದಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಈಗಾಗಲೇ ಮೊದಲ ಅಲೆ ಸಾಕಷ್ಟು ಅನಾಹುತ ಉಂಟು ಮಾಡಿದೆ. ಹಾಗಾಗಿ ಜನರು ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು. ಮೊದಲ ಹಂತದ ಲಸಿಕೆ ಪಡೆದವರು 2ನೇ ಡೋಸ್ ಪಡೆಯಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಸರ್ಕಾರವು ಕೊರೊನಾ ಪೀಡಿತರಿಗೆ ಅಗತ್ಯ ಬೆಡ್ ವ್ಯವಸ್ಥೆ ಮಾಡಬೇಕು. ವೆಂಟಿಲೇಟರ್, ಆಕ್ಸಿಜನ್ ಕೊರತೆಯಾಗದಂತೆ ಕ್ರಮವಹಿಸಬೇಕು. ಅಗತ್ಯವಾಗಿ ಬೇಕಾಗಿರುವ ವ್ಯಾಕ್ಸಿನ್ ಪೂರೈಸಬೇಕು ಎಂದು ಒತ್ತಾಯಿಸಿದ ಅವರು, ಜಿಲ್ಲಾಡಳಿತ ಹೆಚ್ಚುವರಿ ಲಸಿಕಾ ಕೇಂದ್ರ ತೆರೆದು ಲಸಿಕೀಕರಣ ಹೆಚ್ಚಿಸುವತ್ತ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ದೇವೇಂದ್ರಪ್ಪ ಶ್ಯಾಗಲೆ, ಅಶೋಕ್ ಗೋಪನಾಳ್, ತ್ಯಾವಣಿಗೆ ಕೃಷ್ಣಕುಮಾರ್ ಇದ್ದರು.