ಮಲೇಬೆನ್ನೂರು: ಸಂತೆ ಹಾಗೂ ಮಟನ್ ಮಾರುಕಟ್ಟೆ ಮಳಿಗೆಗಳ ಹರಾಜು

ಮಲೇಬೆನ್ನೂರು, ಮಾ.3- ಇಲ್ಲಿನ ಪುರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ಪಟ್ಟಣದ ವಾರದ ಸಂತೆ, ಮತ್ತು ದಿನವಹಿ ಸಂತೆ ಹಾಗೂ ಮಟನ್ ಮಾರುಕಟ್ಟೆಗಳ ಬಹಿರಂಗ ಹರಾಜು ಪ್ರಕ್ರಿಯೆ ಪುರಸಭೆ ಅಧ್ಯಕ್ಷೆ ನಾಹೀದ ಅಂಜುಂ ಅಧ್ಯಕ್ಷತೆಯಲ್ಲಿ ನಡೆಯಿತು.

20201-22 ನೇ ಸಾಲಿನ ವಾರದ ಸಂತೆ ಹರಾಜಿನಲ್ಲಿ 5 ಜನ ಬಿಡ್‌ದಾರರು ಭಾಗವಹಿಸಿದ್ದರು. ಅಂತಿಮವಾಗಿ ಬಿ. ಅನ್ವರ್‌ಬಾಷಾ ಜಿಎಸ್‌ಟಿ ಸೇರಿ 4,18,900 ರೂ.ಗಳನ್ನು ಪುರಸಭೆಗೆ ಸಂದಾಯ ಮಾಡುವಂತೆ ಸೂಚನೆ ನೀಡಲಾಯಿತು.

ಈ ಸಾಲಿನ ದಿನವಹಿ ಸಂತೆ ದೊರೆಸ್ವಾಮಿಯವರಿಗೆ ಜಿಎಸ್‌ಟಿ ಸೇರಿ 2,84,380 ರೂಪಾಯಿಗೆ ಹರಾಜಾಯಿತು. ಕುರಿ, ಕೋಳಿ ಮಟನ್ ಮಾರುಕಟ್ಟೆಯ 15 ಮಳಿಗೆಗಳನ್ನು ವರ್ಷದ ಅವಧಿಗೆ ಹರಾಜು ಮಾಡಲಾಯಿತು. ಎ1 ಮಳಿಗೆ ಜಿಎಸ್‌ಟಿ ಸೇರಿ 3,36,300 ರೂ.ಗಳಿಗೆ, ಎ2 ಮಳಿಗೆ 8,024 ರೂ., ಎ3 ಮಳಿಗೆ 6,018 ರೂ., ಎ4ಮಳಿಗೆ 2,950 ರೂ., ಎ6 ಮಳಿಗೆ 5,546 ರೂ., ಎ7 ಮಳಿಗೆ 16,638 ರೂ., ಎ8 ಮಳಿಗೆ 3,49,280 ರೂ., ಮತ್ತು ಬಿ1 ಮಳಿಗೆ 3,63,440 ರೂ.ಗಳಿಗೆ, ಬಿ2 ಮಳಿಗೆ 4,012 ರೂ.ಗಳಿಗೆ, ಬಿ3 ಮಳಿಗೆ 7,198 ರೂ. ಬಿ.4 ಮಳಿಗೆ 7198 ರೂ., ಬಿ5 ಮಳಿಗೆ 5,428 ರೂ., ಬಿ.6 ಮಳಿಗೆ 3,725 ರೂ., ಬಿ7 ಮಳಿಗೆ 15,576 ರೂ.ಗಳಿಗೆ ಬಿ8 ಮಳಿಗೆ 83,780 ರೂ.ಗಳಿಗೆ ಹರಾಜು ಆಯಿತು.

ಪುರಸಭೆ ಮುಖ್ಯಾಧಿಕಾರಿ ಉದಯಕುಮಾರ್ ಬಿ. ತಳವಾರ ಸ್ಥಳಗಳ ಸಮಸ್ಯೆಗಳನ್ನು ಆಲಿಸಿ, ತಕ್ಷಣ ಪರಿಹಾರ ಒದಗಿಸುವುದಾಗಿ ಬಿಡ್‌ದಾರರಿಗೆ ಭರವಸೆ ನೀಡಿದರು. ಪುರಸಭೆ ಉಪಾಧ್ಯಕ್ಷೆ ಅಂಜಿನಮ್ಮ, ಸದಸ್ಯರಾದ ಬಿ. ಸುರೇಶ್, ಮಹಾಲಿಂಗಪ್ಪ, ಯೂಸುಫ್, ದಾದಾವಲಿ, ಮಾಸಣಗಿ ಶೇಖರಪ್ಪ, ನಾಮಿನಿ ಸದಸ್ಯರಾದ ಜಿ.ಹೆಚ್. ಮಂಜಪ್ಪ, ಪಿ.ಆರ್. ರಾಜು, ಟಿ. ವಾಸಪ್ಪ, ಉಮೇಶ್, ಪ್ರಭು, ಗುರುಪ್ರಸಾದ್, ನವೀನ್, ಇಮ್ರಾನ್ ಇನ್ನಿತರರಿದ್ದರು.

ಸಾಮಾನ್ಯ ಸಭೆ: ಪುರಸಭೆಯ ಸಾಮಾನ್ಯ ಸಭೆಯನ್ನು ಗುರುವಾರ ಬೆಳಿಗ್ಗೆ 11 ಗಂಟೆಗೆ ಅಧ್ಯಕ್ಷೆ ನಾಹೀದ ಅಂಜುಂ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.

error: Content is protected !!