ದಾವಣಗೆರೆ, ಏ.28- ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಅರ್ಚಕರಿಗೆ ಜೀವನ ನಡೆಸಲು ಬಹಳ ತೊಂದರೆಯಾದ ಹಿನ್ನಲೆಯಲ್ಲಿ ಅವರಿಗೆ ದಿನನಿತ್ಯ ಬಳಕೆಯ ಆಹಾರ ಧಾನ್ಯಗಳ ಕಿಟ್ಗಳನ್ನು ವಿತರಿಸಲಾಗು ತ್ತಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ದೇವರಮನಿ ಶಿವಕುಮಾರ್ ತಿಳಿಸಿದರು.
ನಗರದ ರೇಣುಕಾ ಮಂದಿರದ ಆವರಣದಲ್ಲಿ ಇಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಅರ್ಚಕರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿ ಮಾತನಾಡಿದರು.
ದೇಶದಾದ್ಯಂತ ದಿನ ದಿನಕ್ಕೆ ಕೊರೊನಾ 2ನೇ ಅಲೆ ಪ್ರಕರಣಗಳು ಬಹಳ ಜಾಸ್ತಿಯಾಗುತ್ತಿದ್ದು ಕೊರೊನಾ ಕರ್ಫ್ಯೂ, ಲಾಕ್ಡೌನ್ ಹಿನ್ನೆಲೆಯಲ್ಲಿ ದೇವಸ್ಥಾನಗಳೆಲ್ಲಾ ಬಂದ್ ಆಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ದಿನ ನಗರದ ವಿವಿಧ ದೇವಸ್ಥಾನಗಳ 60 ಜನ ಅರ್ಚಕರಿಗೆ ಕಿಟ್ ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಹಾಸಭೆಯಲ್ಲಿ ಚರ್ಚಿಸಿ ಬಡವರಿಗೆ, ಸಂಕಷ್ಟದಲ್ಲಿರುವವರಿಗೆ ಕಿಟ್ ವಿತರಿಸಲಾಗುವುದು ಎಂದವರು ಹೇಳಿದರು.
ಈ ಸಂದರ್ಭದಲ್ಲಿ ಮಹಾಸಭಾ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕರೇಶಿವಪ್ಳರ ಸಿದ್ದೇಶ, ದೇವರಮನಿ ಶಿವರಾಜ, ಪಾಲಿಕೆ ಸದಸ್ಯ ಶಿವನಗೌಡ ಪಾಟೀಲ್, ಜಯಪ್ರಕಾಶ ಮಾಗಿ, ಶ್ರೀಕಾಂತ್ ನೀಲಗುಂದ, ಇಟ್ಟಿಗುಡಿ ಮಹಾದೇವಪ್ಪ, ರುದ್ರೇಶ, ಅಭಿಷೇಕ ಪಿ.ಎಳೆಹೊಳೆ ದೇವೇಂದ್ರಪ್ಪ, ಶಿವಾನಂದ ಬೆನ್ನೂರು ಇತರರು ಇದ್ದರು.