ದಾವಣಗೆರೆ, ಮಾ.2 – ಸರ್ಕಾರ ಈ ವರ್ಷ ಕನ್ನಡ ಕಾಯಕ ವರ್ಷವನ್ನಾಗಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ದಾವಣಗೆರೆ ನ್ಯಾಯಾಲಯಗಳಲ್ಲಿ ಮಹಾನಗರ ಪಾಲಿಕೆ ಕನ್ನಡ ಜಾಗೃತಿ ಸದಸ್ಯ ಮಹಲಿಂಗಪ್ಪ ಎ, ದಿಳ್ಳೆಪ್ಪ, ಬಾ.ಮ. ಬಸವರಾಜಯ್ಯ, ಶ್ರೀಮತಿ ಪುಷ್ಪಲತಾ ಇವರು ಸರ್ಕಾರದ ಸುತ್ತೋಲೆಯಂತೆ ಅಧೀನ ನ್ಯಾಯಾಲಗಳಲ್ಲಿ ಕನ್ನಡದಲ್ಲಿ ಅರ್ಜಿ ಸಲ್ಲಿಸುವುದು, ಕನ್ನಡದ ನಮೂನೆಗಳನ್ನೇ ಬಳಸುವುದು, ವಕೀಲರ ವಾದವನ್ನು ಮತ್ತು ನ್ಯಾಯಾಧೀಶರು ಸಹ ಕನ್ನಡದಲ್ಲಿಯೇ ತೀರ್ಪುಗಳನ್ನು ನೀಡುವುದು. ಈ ಅಂಶಗಳನ್ನು ಪೂರ್ಣ ಪ್ರಮಾಣದಲ್ಲಿ ಸಾಕಾರಗೊಳಿ ಸಬೇಕಾಗಿದೆ ಎಂದು ಕನ್ನಡ ಜಾಗೃತಿ ಸದಸ್ಯರು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಗೀತಾ ಕೆ.ಬಿ. ಅವರಿಗೆ, ಅಲ್ಲದೆ ನ್ಯಾಯಾಲಯದ ಎಲ್ಲ ನ್ಯಾಯಾಧೀಶರುಗಳಿಗೆ ಮತ್ತು ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಲೋಕಿಕೆರೆ ನಾಗರಾಜ್ ಇವರಿಗೂ ಮನವಿ ಅರ್ಪಿಸಿದರು.
ಇದೇ ಸಂದರ್ಭದಲ್ಲಿ ಹಲವಾರು ಹಿರಿಯ, ಕಿರಿಯ ವಕೀಲರು ನಿಕಟಪೂರ್ವ ಅಧ್ಯಕ್ಷರಾದ ಎನ್.ಟಿ ಮಂಜುನಾಥ್, ನಿಕಟಪೂರ್ವ ಕಾರ್ಯ ದರ್ಶಿ ಬಿ.ಎಸ್. ಲಿಂಗರಾಜ್ ಉಪಸ್ಥಿತರಿದ್ದರು, ಅಭಿಯಾನದ ಕೊನೆಯಲ್ಲಿ ಜಾಗೃತ ಸಮಿತಿ ಸದಸ್ಯರಾದ ಮಹಲಿಂಗಪ್ಪ ಎ. ಎಲ್ಲ ವಕೀಲರಿಗೂ ಕನ್ನಡದಲ್ಲಿ ಅರ್ಜಿ ಸಲ್ಲಿಕೆ, ವಾದ ಮಂಡನೆ ಎಲ್ಲಾ ಪ್ರಕ್ರಿಯೆಗಳು ಕನ್ನಡಲ್ಲಿಯೇ ಪರಿಪೂರ್ಣ ಬಳಕೆ ನಿರಂತರವಾಗಿರಲಿ ಎಂದು ಮನವಿ ಮಾಡಿದರು.